ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಈ ಬಾರಿಯೂ ಜೈರಾಂ ರಮೇಶ್ ಅವರಿಗೆ ಟಿಕೆಟ್ ಅಂತಿಮಗೊಳಿಸಿದೆ.
ಕರ್ನಾಟಕ ವಿಧಾನಸಭೆಯಿಂದ ಸದ್ಯಕ್ಕೆ ಕಾಂಗ್ರೆಸ್ ಒಬ್ಬರಷ್ಟೇ ಸಂಸದರನ್ನು ರಾಜ್ಯಸಭೆಗೆ ಕಳುಹಿಸಲು ಸಾಧ್ಯ.
ಕರ್ನಾಟಕ ರಾಜ್ಯವನ್ನೇ ಈಗ ಪ್ರತಿನಿಧಿಸುತ್ತಿರುವ ಜೈರಾಂ ರಮೇಶ್ ಅವರ ಅವಧಿ ಜೂನ್ 23ಕ್ಕೆ ಕೊನೆ ಆಗಲಿದೆ.
ಹೊಸ ಮುಖಕ್ಕೆ ಅಥವಾ ಉಳಿದವರಿಗೆ ಟಿಕೆಟ್ ನೀಡುವ ಬದಲು ಮತ್ತೆ ಕಾಂಗ್ರೆಸ್ ಹೈಕಮಾಂಡ್ ಜೈರಾಂ ರಮೇಶ್ ಅವರ ಹೆಸರನ್ನೇ ಅಂತಿಮಗೊಳಿಸಿರುವುದು ಅಚ್ಚರಿ ಮೂಡಿಸಿದೆ.
ಮೇ 31 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.