ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ (ITBP)ಯಲ್ಲಿ ಗ್ರೂಪ್ ಸಿ ದರ್ಜೆಯ ಕಾನ್ಸ್ಸ್ಟೇಬಲ್ (ಡ್ರೈವರ್) ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 458 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಕೆ ಜೂನ್ 27ರಿಂದ ಆರಂಭವಾಗಲಿದ್ದು, ಜುಲೈ 26 ಅರ್ಜಿ ಸಲ್ಲಿಕೆಗೆ ಕಡೆಯ ದಿನ.
ಎಸ್ಸಿ/ಎಸ್ಟಿ ಮತ್ತು ನಿವೃತ್ತ ಸೈನಿಕರಿಗೆ ಯಾವುದೇ ಶುಲ್ಕ ಇಲ್ಲ. ಒಬಿಸಿ ಮತ್ತು ಸಾಮಾನ್ಯ ಹಾಗೂ ಇಡಬ್ಲ್ಯೂಎಸ್ ವರ್ಗದವರು 100 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.
ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು ಮತ್ತು ಗರಿಷ್ಠ 27 ವರ್ಷದೊಳಗಿರಬೇಕು. ಅಂದರೆ 1996ರಿಂದ 2002ರ ನಡುವೆ ಜನಿಸಿದ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.
ಅಭ್ಯರ್ಥಿಗಳು ಹತ್ತನೇ ತರಗತಿ ಅಥವಾ ಪಿಯುಸಿ ಪಾಸಾಗಿರಬೇಕು ಮತ್ತು ಭಾರೀ ವಾಹನಗಳ ಚಾಲನಾ ಪರವಾನಗಿ (DL) ಹೊಂದಿರಬೇಕು.
ಹುದ್ದೆಗಳ ಮೀಸಲು: ಸಾಮಾನ್ಯ -195, ಎಸ್ಸಿ-74,ಎಸ್ಟಿ-37, ಒಬಿಸಿ – 110, ಇಡಬ್ಲ್ಯೂಎಸ್-42
ವೇತನ ಶ್ರೇಣಿ: ತಿಂಗಳಿಗೆ 25,500 ರೂಪಾಯಿಗಳಿಂದ ಗರಿಷ್ಠ 81,100 ರೂಪಾಯಿಯವರೆಗೆ.
ಆಯ್ಕೆ ವಿಧಾನ: ದೈಹಿಕ ಅರ್ಹತಾ ಪರೀಕ್ಷೆ, ದೈಹಿಕ ಗುಣಮಟ್ಟ ಪರೀಕ್ಷೆ, ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ, ಪುನರ್ ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಕೆ: https://recruitment.itbpolice.nic.in/ ವೆಬ್ಸೈಟ್ಗೆ ತೆರಳಿ ಅರ್ಜಿ ಸಲ್ಲಿಸಬೇಕು.
ADVERTISEMENT
ADVERTISEMENT