BMTC ಡ್ರೈವರ್ ಮನೆ ಮೇಲೆ IT ದಾಳಿ..! ಯಡಿಯೂರಪ್ಪಗೂ ಈತನಿಗೂ ಏನು ನಂಟು..? ಇಲ್ಲಿದೆ ಮಾಹಿತಿ..!

ಇವತ್ತು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರ ಆಪ್ತರಿಗೆ ಆಘಾತ ನೀಡಿದೆ. ಜಲಸಂಪನ್ಮೂಲ ಇಲಾಖೆಯ ಕಾಮಗಾರಿಗಳ ಗುತ್ತಿಗೆದಾರರಿಂದ ಆಗಿರಬಹುದು ಎನ್ನಲಾಗಿರುವ ಆದಾಯ ತೆರಿಗೆ ವಂಚನೆ ಗುಮಾನಿಯಲ್ಲಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ದಾಳಿ ಕೈಗೊಂಡಿದೆ.

ವಿಚಿತ್ರ ಅಂದರೆ ಬಿಎಂಟಿಸಿ ಡ್ರೈವರ್ ಆಗಿದ್ದ ಉಮೇಶ್ ಎನ್ನುವವರ ಮನೆಯಲ್ಲೂ ಆದಾಯ ತೆರಿಗೆ ಇಲಾಖೆ ಶೋಧ ಕೈಗೊಂಡಿದೆ. ಬಿಎಂಟಿಸಿ ಡ್ರೈವರ್ ಆಗಿದ್ದ ಈತನಿಗೂ ಯಡಿಯೂರಪ್ಪ ಕುಟುಂಬಕ್ಕೂ ಹತ್ತಿರದ ನಂಟು. ಈತನ ಮನೆಯ ಹೆಸರು ಕೂಡಾ ಧವಳಗಿರಿ. ಧವಳಗಿರಿ ಸದಾಶಿವನಗರದಲ್ಲಿರುವ ಯಡಿಯೂರಪ್ಪನವರ ಸ್ವಂತ ಮನೆಯ ಹೆಸರು.

2008ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಮುಖ್ಯಮಂತ್ರಿಗಳ ಆಪ್ತ ಶಾಖೆಯಲ್ಲಿ ಎರವಲು ಸೇವೆಯಲ್ಲಿ ಬಂದಿದ್ದ. ಯಡಿಯೂರಪ್ಪ ವಿರೋಧ ಪಕ್ಷದ ನಾಯಕನಾಗಿದ್ದಗಲೂ ಆಪ್ತ ಸಹಾಯಕನಾಗಿಯೇ ಇದ್ದ.

2019ರಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆದಾಗಲೂ ಆಪ್ತ ಸಹಾಯಕನಾಗಿದ್ದ. ಯಡಿಯೂರಪ್ಪ ರಾಜೀನಾಮೆ ಕೊಟ್ಟ ಬಳಿಕವೂ ಈಗ ಬಸವರಾಜ್ ಬೊಮ್ಮಾಯಿ ಕಚೇರಿಯಲ್ಲಿ ಆಪ್ತ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ.

ಮೂಲತಃ ಶಿವಮೊಗ್ಗದವನಾದ ಉಮೇಶ್ ಮೊದಲು ಬಿಜೆಪಿ ಎಂಎಲ್‍ಸಿ ಆಯನೂರು ಮಂಜುನಾಥ್‍ಗೆ ಆಪ್ತ ಸಹಾಯಕನಾಗಿದ್ದ. ಈ ಉಮೇಶ್ ತನಗೂ ಒಬ್ಬ ಆಪ್ತ ಸಹಾಯಕನನ್ನು ಇಟ್ಟುಕೊಂಡಿದ್ದ.

ಜಲಸಂಪನ್ಮೂಲ ಇಲಾಖೆಯಲ್ಲಿನ ಕಾಮಗಾರಿಗಳ ಗುತ್ತಿಗೆ, ವರ್ಗಾವಣೆ ಇವೆಲ್ಲವನ್ನೂ ಇವನೇ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.

LEAVE A REPLY

Please enter your comment!
Please enter your name here