ಜಾರ್ಖಂಡ್ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್ಗೆ ಸಂಬಂಧಿಸಿದ 20 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಇಂದು ಶುಕ್ರವಾರ ಹೇಳಿದ್ದಾರೆ.
ರಾಂಚಿ, ದೆಹಲಿ, ರಾಜಸ್ಥಾನ ಮತ್ತು ಮುಂಬೈನಲ್ಲಿ ಸಿಂಘಾಲ್ಗೆ ಸಂಬಂಧಿಸಿದ 20 ಸ್ಥಳಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಬಿಜೆಪಿ ಸಂಸದ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಜಾರ್ಖಂಡ್ ನ ಮುಖ್ಯಮಂತ್ರಿಯ ಸಹೋದರರು, ಕಾರ್ಯಕರ್ತರಿಗೆ ಒಂದು ಪೈಸೆಯಲ್ಲಿ ಗಣಿಗಳನ್ನು ಹಂಚಿಕೆ ಮಾಡಿದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಸಹಾಯಕಿ ಪೂಜಾ ಸಿಂಘಾಲ್ ಅವರ 20 ಸ್ಥಳಗಳಲ್ಲಿ ಇಡಿ ದಾಳಿ ನಡೆಸುತ್ತಿದೆ. ರಾಂಚಿ, ದೆಹಲಿ, ರಾಜಸ್ಥಾನ ಮತ್ತು ಮುಂಬೈನ ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ ಎಂದು ನಿಶಿಕಾಂತ್ ದುಬೆ ಟ್ವೀಟ್ ಮಾಡಿದ್ದಾರೆ.
ಮೇ 2 ರಂದು ಭಾರತೀಯ ಚುನಾವಣಾ ಆಯೋಗವು (ಇಸಿಐ) ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಗಣಿಗಾರಿಕೆ ಗುತ್ತಿಗೆಗೆ ಸಂಬಂಧಿಸಿದಂತೆ “ಆಫೀಸ್ ಆಫ್ ಪ್ರಾಫಿಟ್” ಆರೋಪದ ಮೇಲೆ ನೋಟಿಸ್ ಕಳುಹಿಸಿತ್ತು.
ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ರಘುಬರ್ ದಾಸ್ ಅವರು, ರಾಂಚಿಯ ಅಂಗಾರ ಬ್ಲಾಕ್ನಲ್ಲಿ ಕಲ್ಲು ಗಣಿಗಾರಿಕೆ ಗುತ್ತಿಗೆ ನೀಡುವ ವೇಳೆ ಮುಖ್ಯಮಂತ್ರಿ ಸೋರೆನ್ ಅವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೀಗ ಬಂದ ಮಾಹಿತಿಯ ಪ್ರಕಾರ ಪೂಜಾ ಸಿಂಘಾಲ್ ಅವರ ಮನೆಯಲ್ಲಿ ಬರೋಬ್ಬರಿ 17 ಕೋ.ರೂಗಳ ನಗದು ದೊರಕಿದೆ ಎಂದು ತಿಳಿದುಬಂದಿದೆ. ನಿಖರ ಮಾಹಿತಿಗಾಗಿ ಅಧಿಕಾರಿಗಳು ಮನೆಗೆ ಹಣ ಎಣಿಸುವ ಯಂತ್ರ ತಂದು ಹಣ ಎಣಿಕೆ ಮಾಡುತ್ತಿದ್ದಾರೆ.
#Jharkhand: Cash worth more than 17 crores recovered from IAS Pooja Singhal's CA's house pic.twitter.com/UHeGU1Lfn3
— Siraj Noorani (@sirajnoorani) May 6, 2022