ISRO: ಅಂತರಿಕ್ಷದಲ್ಲಿ ಚಿಕನ್ ಬಿರಿಯಾನಿ, ಅನ್ನ ಸಾಂಬಾರ್ – ಗಗನಯಾನಿಗಳಿಗಾಗಿ ಮೈಸೂರಿನಲ್ಲಿ ವಿಶೇಷ ಆಹಾರ

ಇಸ್ರೋ ಸಂಸ್ಥೆ ಕೈಗೊಂಡಿರುವ ಗಗನ್  ಯಾನ್ ಪ್ರಾಜೆಕ್ಟ್ ನಲ್ಲಿ ಪಾಲ್ಗೊಳ್ಳಲಿರುವ ಗಗನಯಾನಿಗಳಿಗೆ ಅಗತ್ಯ ಇರುವ ಆಹಾರ ಪದಾರ್ಥಗಳ ತಯಾರಿ ಶುರುವಾಗಿದೆ. ಮೈಸೂರಿನಲ್ಲಿ DRDOಗೆ ಸೇರಿದ DFRL (ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬ್ ) ಈ  ಆಹಾರವನ್ನು ತಯಾರಿಸುತ್ತಿದೆ.

ಭೂಮಿ ಮೇಲಾದ್ರೆ, ಕುಳಿತುಕೊಂಡೋ, ನಿಂತುಕೊಂಡೋ ಊಟ ಮಾಡಲು  ಅವಕಾಶ ಇರುತ್ತದೆ. ಆದರೆ ಆಂತರಿಕ್ಷದಲ್ಲಿ ಗುರುತ್ವಾಕರ್ಷಣ ಶಕ್ತಿ ಇರಲ್ಲ.. ಅಲ್ಲಿ ನಮ್ಮ  ಚಪಾತಿ, ಸಾಂಬಾರ್ ಎಲ್ಲಾ ಗಾಳಿಯಲ್ಲಿ ತೆಲುತ್ತಿರುತ್ತದೆ. ಹೀಗಾಗಿ ಗಗನಯಾನಿಗಳಿಗಾಗಿ ವಿಶೇಷ  ಆಹಾರ ಪದಾರ್ಥಗಳನ್ನು DFRL ತಯಾರು  ಮಾಡುತ್ತಿದೆ.

ಗಗನಯಾನದ ಭಾಗವಾಗಿ ಬಾಹ್ಯಕಾಶಕ್ಕೆ ತೆರಳುತ್ತಿರುವ ಮೂವರು  ಗಗನಯಾನಿಗಳು ಭಾರತೀಯರೇ ಆಗಿದ್ದಾರೆ. ರೆಡಿ  ಟು ಈಟ್ ಆಹಾರಗಳನ್ನು ಕೂಡ ತಯಾರಿ ಮಾಡಲಾಗುತ್ತಿದೆ.

ರೆಡಿ ಟು ಈಟ್

ವೆಜ್ ಪಲಾವ್, ವೆಜ್ ಬಿರಿಯಾನಿ, ಚಿಕನ್ ಬಿರಿಯಾನಿ, ಚಿಕನ್  ಕುರ್ಮಾ, ದಾಲ್ ಮಖಾನಿ, ಶಾಹಿ  ಪನ್ನೀರ್, ಸೂಜಿ ಹಲ್ವಾ, ಚಿಕನ್  ಕಟ್ ರೋಲ್, ಎಗ್ ಕಟ್ ರೋಲ್, ಸ್ಟಫ್ ಪರೋಟ.

ರೆಡಿ  ಟು ಡ್ರಿಂಕ್

ಮ್ಯಾಂಗೋ ನೆಕ್ಟರ್, ಪೈನಾಪಲ್ ಜ್ಯೂಸು, ಟೀ, ಕಾಫಿ

ಕಾಂಬೊ ಫುಡ್

ರಾಜ್ಮಾ ಚಾವಲ್, ಸಾಂಬಾರ್ ಚಾವಲ್, ದಾಲ್ ಚಾವಲ್, ರೆಡಿ  ಟು ಈಟ್ ಎನರ್ಜಿ ಬಾರ್ಸ್

LEAVE A REPLY

Please enter your comment!
Please enter your name here