ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ 2021-22ನೇ ಸಾಲಿನ ಜೀವಜಲ ಯೋಜನೆಯಡಿ ಸೌಲಭ್ಯ ಪಡೆಯಲು ಕನಿಷ್ಠ ಒಂದು ಎಕರೆ ಗರಿಷ್ಠ ಐದು ಎಕರೆ ಜಮೀನು ಹೊಂದಿರುವ ಹಾಗೂ ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿಲ್ಲದೆ ವಾರ್ಷಿಕ ವರಮಾನ 40 ಸಾವಿರ ರೂ.ಗಳ ಮಿತಿ ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ವೈಯಕ್ತಿಕ ನೀರಾವರಿ ತೆರೆದಬಾವಿ, ಕೊಳವೆ ಬಾವಿಗಳಿಗೆ ಘಟಕ ವೆಚ್ಚ 2.50 ಲಕ್ಷ ರೂ.ಗಳನ್ನು ನಿಗಧಿಪಡಿಸಿದ್ದು, ಇದರಲ್ಲಿ 2 ಲಕ್ಷ ರೂ.ಗಳ ಸಹಾಯಧನ ಹಾಗೂ 50,000 ರೂ.ಗಳ ಶೇ.4%ರ ಬಡ್ಡಿದರದ ಸಾಲ ಒಳಗೊಂಡಿರುತ್ತದೆ. ನಿಗಧಿತ ಘಟಕ ವೆಚ್ಚದಿಂದ ಜೀವಜಲ ಯೋಜನೆಯಡಿ ಈ ಸೌಲಭ್ಯ ನೀಡಲಾಗುವುದು.
ಅರ್ಜಿ ಸಲ್ಲಿಸಲು ನಿಗಮದ ವೆಬ್ ಸೈಟ್ ತಿತಿತಿ.ಜbಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅಥವಾ ನಗರದ ಉರ್ವಸ್ಟೋರ್ನಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಮೇ.10 ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ:0824-2456544 ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.