IPS​ ಅಧಿಕಾರಿಗೆ ಲೈಂಗಿಕ ಕಿರುಕುಳ – IPS​ ಅಧಿಕಾರಿಗೆ ಜೈಲು

ಮಹಿಳಾ ಐಪಿಎಸ್​ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಐಪಿಎಸ್​ ಅಧಿಕಾರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ತಮಿಳುನಾಡು ಪೊಲೀಸ್​ ಇಲಾಖೆಯಲ್ಲಿ ಎಡಿಜಿಪಿಯಾಗಿದ್ದ ರಾಜೇಶ್​ ದಾಸ್​ ಅಪರಾಧಿ ಎಂದು ತೀರ್ಪು ನೀಡಿರುವ ವಿಲ್ಲುಪುರಂನ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಜೊತೆಗೆ 10 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ.

ಆದರೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿರುವ ನ್ಯಾಯಾಲಯ ರಾಜೇಶ್​ ದಾಸ್​ಗೆ ಜಾಮೀನು ಮಂಜೂರು ಮಾಡಿದೆ.

ಆ ಮಹಿಳಾ ಐಪಿಎಸ್​ ಅಧಿಕಾರಿ ದೂರು ಕೊಡದಂತೆ ತಡೆದಿದ್ದ ಚೆಂಗಲ್ಪಟ್ಟು ಪೊಲೀಸ್​ ವರಿಷ್ಠಾಧಿಕಾರಿ ಡಿ ಕಣ್ಣನ್​ ಅವರಿಗೆ 500 ರೂಪಾಯಿ ದಂಡ ವಿಧಿಸಿದೆ.

2021ರಲ್ಲಿ ಸರ್ಕಾರಿ ಕಾರಿನಲ್ಲಿ ಕರ್ತವ್ಯ ನಿಮಿತ್ತ ತೆರಳುತ್ತಿದ್ದ ವೇಳೆ ಆಗ ಕಾನೂನು ಮತ್ತು ಸುವ್ಯವಸ್ಥೆ ವಿಶೇಷ ನಿರ್ದೇಶಕರಾಗಿದ್ದ ರಾಜೇಶ್​ ದಾಸ್​ ಅವರು ಪೊಲೀಸ್​ ಅಧೀಕ್ಷಕಿಯಾಗಿದ್ದ ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ್ದರು.

ಈ ಕೃತ್ಯದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದ ಮದ್ರಾಸ್​ ಹೈಕೋರ್ಟ್​ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಆ ಬಳಿಕ ದಾಸ್​ ಅವರನ್ನು ಅಮಾನತುಗೊಳಿಸಲಾಗಿತ್ತು.