ಇವತ್ತೂ ಮಳೆ ಬಂದು ಫೈನಲ್​ ರದ್ದಾದ್ರೆ IPL ಯಾರ್​ ಗೆಲ್ತಾರೆ..?

ನಿನ್ನೆ ಸುರಿದ ಧಾರಾಕಾರ ಮಳೆಯ ಕಾರಣದಿಂದ ಐಪಿಎಲ್​ ಫೈನಲ್​ ಪಂದ್ಯ ಇವತ್ತಿಗೆ ಮುಂದೂಡಿಕೆಯಾಗಿದೆ. ಇವತ್ತು ರಾತ್ರಿ 7.30ಕ್ಕೆ ಅಹಮದಾಬಾದ್​ನಲ್ಲಿ ಗುಜರಾತ್​ ಟೈಟಾನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್​ 16ನೇ ಐಪಿಎಲ್​ ಟ್ರೋಪಿ ಗೆಲ್ಲಲು ಮತ್ತೊಮ್ಮೆ ಮುಖಾಮುಖಿಯಾಗಲಿವೆ.
ಆದರೆ ಒಂದು ವೇಳೆ ಇವತ್ತೂ ಮಳೆಯಾಗಿ ಫೈನಲ್​ ಪಂದ್ಯ ರದ್ದಾದರೆ ಆಗ ಯಾರಿಗೆ ಐಪಿಎಲ್​ ಟ್ರೋಫಿ ಸಿಗಲಿದೆ..?
ಒಂದು ವೇಳೆ ಇವತ್ತೂ ಮಳೆಯಾಗಿ ಫೈನಲ್​ ರದ್ದಾದರೆ ಆಗ ಗುಜರಾತ್​ ಟೈಟನ್ಸ್​​ಗೆ ಐಪಿಎಲ್​ ಟ್ರೋಫಿ ಸಿಗಲಿದೆ.
ಲೀಗ್​ ಪಂದ್ಯದಲ್ಲಿ ಕ್ರಮಾಂಕದಲ್ಲಿ ಗುಜರಾತ್​ ಮೊದಲ ಸ್ಥಾನದಲ್ಲಿದ್ದ ಕಾರಣ ಲೀಗ್​ ಪಂದ್ಯದ ಕ್ರಮಾಂಕವನ್ನು ಆಧರಿಸಿ ಗುಜರಾತ್​ನ್ನೇ ಐಪಿಎಲ್​​ ವಿಜೇತ ತಂಡ ಎಂದು ಘೋಷಿಸಲಾಗುತ್ತದೆ.
14 ಪಂದ್ಯಗಳಲ್ಲಿ 10ರಲ್ಲಿ ಗೆದ್ದಿದ್ದ ಗುಜರಾತ್​ 20 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ರೆ, ಚೆನ್ನೈ 8 ಪಂದ್ಯಗಳನ್ನು ಗೆದ್ದು 17 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
16 ಐಪಿಎಲ್​ ಸರಣಿಗಳ ಪೈಕಿ ಇದೇ ಮೊದಲ ಬಾರಿಗೆ ಐಪಿಎಲ್​ ಫೈನಲ್​ ಪಂದ್ಯ ಮೀಸಲಿಟ್ಟ ದಿನಕ್ಕೆ ಮುಂದೂಡಿಕೆಯಾಗಿದೆ.
ನಿನ್ನೆ ಫೈನಲ್​ ಪಂದ್ಯಕ್ಕಾಗಿ ವಿತರಿಸಲಾಗಿದ್ದ ಟಿಕೆಟನ್ನೇ ಇವತ್ತು ಪಂದ್ಯ ವೀಕ್ಷಣೆಗೆ ಬಳಸಬಹುದು ಎಂದು ಐಪಿಎಲ್​ ಆಡಳಿತ ಮಂಡಳಿ ಪ್ರೇಕ್ಷಕರಿಗೆ ಸೂಚಿಸಿದೆ.