ಐಪಿಎಲ್ ಫೈನಲ್ ಪಂದ್ಯದಲ್ಲಿ ಬೆಂಕಿ ಬಿರುಗಾಳಿಯಂತೆ ಬ್ಯಾಟ್ ಬೀಸಿ ಚೆನ್ನೈ ಸೂಪರ್ ಕಿಂಗ್ಸ್ ನಿದ್ದೆಗೆಡಿಸಿದ್ದ ಸಾಯಿ ಸುದರ್ಶನ್ ಅವರನ್ನು ಗುಜರಾತ್ ಟೈಟಾನ್ಸ್ ಖರೀದಿಸಿದ್ದು ಎಷ್ಟು ಮೊತ್ತಕ್ಕೆ ಗೊತ್ತಾ..?
ಕೇವಲ 20 ಲಕ್ಷ ರೂಪಾಯಿಗೆ. ಅಂದಹಾಗೆ ಇದು ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಸಾಯಿ ಸುದರ್ಶನ್ಗೆ ಸಿಕ್ಕಿದ್ದ ಮೊತ್ತಕ್ಕಿಂತ 1 ಲಕ್ಷದ 60 ಸಾವಿರ ರೂಪಾಯಿಗಿಂತಲೂ ಕಡಿಮೆ.
ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಚೆಪಕ್ ಸೂಪರ್ ಗಿಲ್ಲಿಸ್ ತಂಡದ ಮಾಲೀಕರು ಸಾಯಿ ಅವರಿಗೆ 21.6 ಲಕ್ಷ ರೂಪಾಯಿ ಕೊಟ್ಟು ತಂಡಕ್ಕೆ ಆಯ್ಕೆ ಮಾಡಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಅವರು ತಮ್ಮನ್ನು ಆಯ್ಕೆ ಮಾಡಿಕೊಳ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಸಾಯಿ ಅವರಿಗೆ ನಿರಾಸೆ ಆಗಿತ್ತು. ಕೊನೆಗೆ ಇವರು ಐಪಿಎಲ್ ಹರಾಜಿನಲ್ಲಿ ಗುಜರಾತ್ ಪಾಲಾದರು.
ಸಾಯಿ ಸುದರ್ಶನ್ ಅವರು ಈ ಐಪಿಎಲ್ನಲ್ಲಿ 362 ರನ್ ಗಳಿಸಿದ್ದಾರೆ. ಇದರಲ್ಲಿ ಇವತ್ತು ಚೆನ್ನೈ ವಿರುದ್ಧವೇ ಗಳಿಸಿದ ಅತ್ಯಧಿಕ 96 ರನ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 62 ರನ್ ಮತ್ತು ಕೆಕೆಆರ್ ವಿರುದ್ಧದ 53 ರನ್ ಸೇರಿದೆ.
ADVERTISEMENT
ADVERTISEMENT