IPC, CrPC, ಎವಿಡೆನ್ಸ್​ ಕಾಯ್ದೆಗಳ ಹೆಸರು ಬದಲು – ಲೋಕಸಭೆಯಲ್ಲಿ ಪ್ರಧಾನಿ ಮೋದಿ ಸರ್ಕಾರದಿಂದ ಮಸೂದೆ ಮಂಡನೆ

ಭಾರತದ ನ್ಯಾಯಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಭಾರತೀಯ ದಂಡ ಸಂಹಿತೆ ಮತ್ತು ಅಪರಾಧ ದಂಡ ಸಂಹಿತೆಯ ಬದಲು ಹೊಸ ಸಂಹಿತೆಗಳನ್ನು ಜಾರಿಗೊಳಿಸುವ ಸಂಬಂಧ ಮಸೂದೆ ಮಂಡಿಸಿದೆ.

ಅಚ್ಚರಿಯ ರೀತಿಯಲ್ಲಿ ಸಂಸತ್​ ಅಧಿವೇಶನದ ಕೊನೆಯ ದಿನವಾದ ಇವತ್ತು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಮಸೂದೆ ಮಂಡಿಸಿದರು.

ಐಪಿಸಿ (ಇಂಡಿಯನ್​ ಪೆನಾಲ್​​ ಕೋಡ್​ )ಗೆ ಭಾರತೀಯ ನ್ಯಾಯ ಸಂಹಿತೆ 2023ಯನ್ನು ಜಾರಿಗೆ ತರಲಾಗುತ್ತದೆ. 

ಕ್ರಿಮಿನಲ್​ ಪ್ರೊಸಿಜರ್​ ಕೋಡ್​ ಬದಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ಯನ್ನು ಜಾರಿಗೆ ತರಲಾಗುತ್ತದೆ.

ಎವಿಡೆನ್ಸ್​ ಕಾಯ್ದೆಯ ಬದಲು ಭಾರತೀಯ ಸಾಕ್ಷ್ಯ ಸಂಹಿತೆಯನ್ನು ಜಾರಿಗೆ ತರಲಾಗುತ್ತದೆ.

ಈ ಹಿಂದೆ ಐಪಿಸಿಯಲ್ಲಿ 511 ಕಲಂಗಳ ಬದಲಿಗೆ ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ 356 ಕಲಂಗಳಿರಲಿವೆ. ಅಪರಾಧ ಸಂಹಿತೆಯಲ್ಲಿದ್ದ 484 ಕಲಂಗಳ ಬದಲಿಗೆ ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ 533 ಕಲಂಗಳಿರಲಿವೆ. ಎವಿಡೆನ್ಸ್​ ಕಾಯ್ದೆಯಲ್ಲಿರುವ 167 ಕಲಂಗಳ ಬದಲಿಗೆ ಹೊಸ ಭಾರತೀಯ ಸಾಕ್ಷ್ಯ ಸಂಹಿತೆಯಲ್ಲಿ 170 ಕಲಂಗಳಿರಲಿವೆ.

LEAVE A REPLY

Please enter your comment!
Please enter your name here