ಪ್ರವಾದಿ ಮೊಹಮ್ಮದ್ ಅವಹೇಳನ : ತೆಲಂಗಾಣ ಬಿಜೆಪಿ ಶಾಸಕನ ಮರುಬಂಧನ

T Rajasingh

ಪ್ರವಾದಿ ಮೊಹಮ್ಮದ್​ರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾಸಿಂಗ್​ರನ್ನು (T Rajasingh) ಪೊಲೀಸರು ಇಂದು ಮರುಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ವಿಡಿಯೋ ಹೇಳಿಕೆಯಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ತೆಲಂಗಾಣದ ಬಿಜೆಪಿ ಶಾಸಕ ಮಾತನಾಡಿದ್ದರು. ಅನಂತರ ಮುಸ್ಲಿಂ ಸಂಘಟನೆಗಳ ದೂರನ್ನು ಆಧರಿಸಿ ಪೊಲೀಸರು ಅವರನ್ನು ಬಂಧಿಸಿ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ : ಪ್ರವಾದಿ ಮಹಮ್ಮದರ ಅವಹೇಳನ – ಬಿಜೆಪಿ ಶಾಸಕ ಟೈಗರ್​ ರಾಜಾಸಿಂಗ್​ ಬಂಧನ

ಈ ಬೆನ್ನಲ್ಲೇ ಬಿಜೆಪಿ ಶಾಸಕ ಟಿ ರಾಜಾಸಿಂಗ್​ರಿಗೆ (T Rajasingh) ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

ಇಂದು ಮತ್ತೆ ಶಾಸಕ ಟಿ ರಾಜಾಸಿಂಗ್​ ರನ್ನು ಮನೆಗೆ ಹೋಗಿ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಶಾಸಕರ ಮನೆ ಮುಂದೆ ಅವರ ಬೆಂಬಲಿಗರು ಸಾಕಷ್ಟು ಪ್ರಮಾಣದಲ್ಲಿ ನೆರೆದಿದ್ದರು.

LEAVE A REPLY

Please enter your comment!
Please enter your name here