ಮುಸ್ಲಿಂ ಬಿಜೆಪಿ ನಾಯಕಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ : ಧರ್ಮಗುರುಗಳಿಂದ ಕೊಲೆ ಬೆದರಿಕೆ

Rubikhan

ಉತ್ತರಪ್ರದೇಶದ ಮೀರತ್‌ನಲ್ಲಿರುವ ತನ್ನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವುದಕ್ಕೆ ಮುಸ್ಲಿಂ ಧರ್ಮಗುರುಗಳಿಂದ ಬೆದರಿಕೆ ಬರುತ್ತಿದೆ ಎಂಬುದಾಗಿ ಬಿಜೆಪಿ ನಾಯಕಿ ರೂಬಿಖಾನ್ (Rubikhan) ಆರೋಪಿಸಿದ್ದಾರೆ.

ಉತ್ತರ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು, ಮುಸ್ಲಿಂ ಧರ್ಮಗುರುಗಳು ಬೆದರಿಕೆ ಹಾಕಿದ್ದಾರೆ. ಈ ಹಿಂದೆಯೂ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮನೆಯುಲ್ಲಿ ಪೂಜೆ ಸಲ್ಲಿಸಿದಾಗಲೂ ತನ್ನ ವಿರುದ್ಧ ಫತ್ವಾ ಹೊರಡಿಸಲಾಗಿತ್ತು ಎಂದು ಹೇಳಿದರು.

ಇದೀಗ, ನಾನು 7 ದಿನಗಳ ಕಾಲ ಮನೆಯಲ್ಲಿ ಗಣೇಶನ ವಿಗ್ರಹ ಸ್ಥಾಪಿಸಿದ್ದೇನೆ, ಶ್ರದ್ಧೆಯಿಂದ ಪೂಜಿಸಿ, ವಿಸರ್ಜನೆ ಮಾಡುತ್ತೇನೆ. ಅದಕ್ಕಾಗಿ ನನ್ನ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಅಲ್ಲದೇ, ಮುಸ್ಲಿಂ ಧರ್ಮಗುರುಗಳು ನನ್ನ ವಿರುದ್ಧ ತಿರುಗಿಬಿದ್ದಿದ್ದಾರೆ, ನನ್ನನ್ನು ಕೊಲ್ಲಲು ಬಯಸುತ್ತಿದ್ದಾರೆ.

ಈ ಹಿಂದೆಯೂ ನನ್ನನ್ನು ಟಾರ್ಗೆಟ್ ಮಾಡಲಾಗಿತ್ತು. ಈಗ ಬೆದರಿಕೆ ಕರೆಗಳು ಬರುತ್ತಿವೆ. ಆದರೆ ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ಗಣೇಶನನ್ನು ಪೂಜಿಸಿ, ವಿಸರ್ಜನೆ ಮಾಡುತ್ತೇನೆ. ನನ್ನ ಪತಿ ನನ್ನೊಂದಿಗೆ ಇದ್ದಾರೆ ಎಂದು ರೂಬಿಖಾನ್ (Rubikhan) ಹೇಳಿದ್ದಾರೆ.

ಇದನ್ನೂ ಓದಿ : ಶಾಸಕ ಜಮೀರ್ ಕಚೇರಿಯಲ್ಲಿ ಗಣೇಶನಿಗೆ ಪೂಜೆ

LEAVE A REPLY

Please enter your comment!
Please enter your name here