ನೊಂದ ಗಂಡಂದಿರ ಸಂಘದ ಸದಸ್ಯರು ವಿಚಿತ್ರ ಪೂಜೆ ಮಾಡಿದ್ದಾರೆ. ನಮಗೆ ಇಂಥಾ ಹೆಂಡ್ತೀರು… ಏಳು ಜನ್ಮವಲ್ಲ.. ಏಳು ಸೆಕೆಂಡ್ ಕೂಡಾ ಬೇಡ..ಎಂದು ದೇವರನ್ನು ಪ್ರಾರ್ಥಿಸಿದ್ದಾರೆ. ಪೂಜಿಸಿದ್ದಾರೆ. ದೇವರನ್ನು ಬೇಡಿಕೊಂಡಿದ್ದಾರೆ.
ವಟ ಸಾವಿತ್ರಿ ಹುಣ್ಣಿಮೆ ದಿನದಂದು ಹೆಣ್ಮಕ್ಕಳು, ಮಹಿಳೆಯರು ಏಳೇಳು ಜನ್ಮಕ್ಕೂ ನಮಗೆ ಇದೇ ಗಂಡನನ್ನು ದಯಪಾಲಿಸು ಎಂದು ಪೂಜೆ ಮಾಡುತ್ತಾರೆ.
ಆದರೇ, ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿರುವ ನೊಂದ ಗಂಡಂದಿರ ಸದಸ್ಯರು ಮಾತ್ರ, ನಮಗೆ ಅಂಥಾ ಹೆಂಡತಿಯರು ಏಳು ಜನ್ಮಕ್ಕಲ್ಲ. ಏಳು ಸೆಕೆಂಡ್ ಸಹ ಬೇಡ ಸ್ವಾಮಿ ಎಂದು ವಟ ವೃಕ್ಷ ಸುತ್ತಿದ್ದಾರೆ.
ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.