22 ಜನರಿದ್ದ ನೇಪಾಳದದ ತಾರಾ ಏರ್ವೇಸ್ನ ವಿಮಾನ ನಿಲ್ದಾಣದಿಂದ ಸಂಪರ್ಕ ಕಳೆದುಕೊಂಡ ಬೆನ್ನಲ್ಲೇ, 62 ಜನರನ್ನು ಹೊತ್ಯೊಯ್ದಿದ್ದ ಇಂಡೋನೇಷ್ಯಾದ ಬೋಯಿಂಗ್ 737 ವಿಮಾನ ಇದೀಗ ನಿಲ್ದಾಣದಿಂದ ಸಂಪರ್ಕ ಕಳೆದುಕೊಂಡಿದೆ.
ಜಕಾರ್ತನಿಂದ ಟೇಕ್ ಆಫ್ ಆದ ಇಂಡೋನೇಷ್ಯಾದ ದೇಶಿಯ ವಿಮಾನವೊಂದು ಶನಿವಾರ ನಾಪತ್ತೆಯಾಗಿದ್ದು, ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋಯಿಂಗ್ 737-500 ವಿಮಾನವು ಜಕಾರ್ತಾದಿಂದ ಮಧ್ಯಾಹ್ನ 1:56 ಕ್ಕೆ ಟೇಕ್ ಆಫ್ ಆಯಿತು ಮತ್ತು ಮಧ್ಯಾಹ್ನ 2:40 ಕ್ಕೆ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತು ಎಂದು ಇಂಡೋನೇಷ್ಯಾದ ಸಾರಿಗೆ ಸಚಿವಾಲಯದ ವಕ್ತಾರ ಅದಿತಾ ಐರಾವತಿ ಅವರು ಹೇಳಿದ್ದಾರೆ.
ವಿಮಾನ ಸುಮಾರು 10000 ಅಡಿ ಮೇಲೆ ಹಾರುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ರಡಾರ್ನೊಂದಿಗೆ ಸಂಪರ್ಕ ಕಡಿದುಕೊಂಡಿದೆ.
ನಾಪತ್ತೆಯಾದ ವಿಮಾನದಲ್ಲಿ ಸುಮಾರು 62 ಪ್ರಯಾಣಿಕರಿದ್ದು, ಜಕಾರ್ತದಿಂದ ಟೇಕ್ ಆಫ್ ಆಗಿದ್ದ ವಿಮಾನ ಪಶ್ಚಿಮ ಕಲಿಮಾಂಟನ್ನ ಪೊಂಟಿಯಾನನಕ್ನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ರಡಾರ್ ನಿಂದ ಸಂಪರ್ಕ ಕಡಿದುಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ಹಾಗೂ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿಯ ಸಹಕಾರದೊಂದಿಗೆ ನಾಪತ್ತೆಯಾದ ವಿಮಾನ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಐರಾವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.