ಭಾರತ- ಆಸ್ಟ್ರೇಲಿಯಾ Test ಪಂದ್ಯ- ಭಾರತದ ಧ್ವಜ ಬದಲು BJP ಧ್ವಜ ಪ್ರದರ್ಶನ

ಓವಲ್​ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದೆ.
ಟಾಸ್​ ಗೆದ್ದು ಭಾರತ ಆಸ್ಟ್ರೇಲಿಯಾಕ್ಕೆ ಬ್ಯಾಟಿಂಗ್​ ಬಿಟ್ಟುಕೊಟ್ಟಿದೆ. ಮೊದಲ ದಿನದ ಆಟದಲ್ಲಿ ಆಸ್ಟ್ರೇಲಿಯಾ 3 ವಿಕೆಟ್​ ನಷ್ಟಕ್ಕೆ 327 ರನ್​ ಗಳಿಸಿದೆ.
ಭಾರತದ ಧ್ವಜ ಬದಲು ಬಿಜೆಪಿ ಧ್ವಜ:
ಓವಲ್​ನಲ್ಲಿ ನಡೆಯುತ್ತಿರುವ ಈ ಟೆಸ್ಟ್​ ಪಂದ್ಯದ ವೇಳೆ ಬಿಜೆಪಿ ಅಭಿಮಾನಿಗಳು ಬಿಜೆಪಿ ಧ್ವಜವನ್ನು ಪ್ರದರ್ಶಿಸಿದ್ದಾರೆ.
ಪಕ್ಕದಲ್ಲೇ ಭಾರತ ಕ್ರಿಕೆಟ್​ ಅಭಿಮಾನಿಗಳು ಭಾರತದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿದ್ದಾರೆ.

ತಮಿಳುನಾಡು ಮೂಲದ ಕ್ರಿಕೆಟ್​ ಅಭಿಮಾನಿಗಳು ಪ್ರಧಾನಿ ಮೋದಿ ಮತ್ತು ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಅವರ ಚಿತ್ರ ಇರುವ ಬ್ಯಾನರ್​ ಪ್ರದರ್ಶಿಸಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ಗೆಲುವಿಗೆ ಬಿಜೆಪಿ ಕಾರ್ಯಕರ್ತರಾಗಿರುವ ರವೀಂದ್ರ ಜಡೇಜಾ ಕಾರಣ ಎಂದು ಇತ್ತೀಚೆಗಷ್ಟೇ ಅಣ್ಣಾಮಲೈ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.