ಇಂಗ್ಲೆAಡ್ ವಿರುದ್ಧ ಟೆಸ್ಟ್ ಸರಣಿ: ಟೀಂ ಇಂಡಿಯಾ ಘೋಷಣೆ

ಇಂಗ್ಲೆAಡ್ ವಿರುದ್ಧ ಮರು ಆಯೋಜನೆಗೊಂಡಿರುವ 5ನೇ ಟೆಸ್ಟ್ ಪಂದ್ಯಕ್ಕೆ ಭಾರತದ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನಾಯಕರಾಗಿದ್ದು, ಕೆ ಎಲ್ ರಾಹುಲ್ ಉಪ ನಾಯಕ.

ಜುಲೈ 1ರಿಂದ 5ರವರೆಗೆ ಟೆಸ್ಟ್ ಪಂದ್ಯ ನಡೆಯಲಿದೆ. ಸದ್ಯ ಈ ಸರಣಿಯಲ್ಲಿ ಭಾರತ 2-1 ಅಂತರದಿAದ ಮುನ್ನಡೆಯಲಿದೆ.

ಟೀಂ ಇಂಡಿಯಾ ಈ ರೀತಿ ಇದೆ:

ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್ (ಉಪನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹುನುಮಾ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್, ಕೆ ಎಸ್ ಭರತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದುಲ್ ಥಾಕೂರ್, ಮೊಹಮ್ಮದ್ ಶಮಿ, ಜಸ್ಪಿçÃತ್ ಬೂಮ್ರಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮ್ಯಾಂಚೆಸ್ಟರ್ ನಲ್ಲಿ ಐದನೇ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಆದರೆ ಐದನೇ ಟೆಸ್ಟ್ ಆರಂಭಕ್ಕೂ ಮೊದಲು ಟೀ ಇಂಡಿಯಾ ಆಟಗಾರರಲ್ಲಿ ಕೋವಿಸ್ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದರ ಕಾರಣ ಪಂದ್ಯವನ್ನು ಮುಂದೂಡಲಾಗಿತ್ತು.

ಆ ಟೆಸ್ಟ್ ಸರಣಿ ವೇಳೆ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿದ್ದರು.

ಈಗಾಗಲೇ 2 ಪಂದ್ಯವನ್ನು ಭಾರತ ಗೆದ್ದುಕೊಂಡಿದೆ. ಸರಣಿ ಸಮ ಮಾಡಿಕೊಳ್ಳಲು ಇಂಗ್ಲೆAಡ್ ಐದನೇ ಟೆಸ್ಟ್ ಗೆಲ್ಲಬೇಕಿದೆ.

 

LEAVE A REPLY

Please enter your comment!
Please enter your name here