ಕೆಎಸ್ಆರ್ ಬೆಂಗಳೂರು-ಶಿವಮೊಗ್ಗ, ಶಿವಮೊಗ್ಗ- ಕೆಎಸ್ಆರ್ ಬೆಂಗಳೂರು ನಡುವೆ ಸಂಚರಿಸುವ ಜನಶತಾಬ್ದಿ ರೈಲಿನ ಇಂಜಿನ್ನ್ನು ಡೀಸೆಲ್ ಇಂಜಿನ್ನಿಂದ ವಿದ್ಯುತ್ ಚಾಲಿತ ಇಂಜಿನ್ಗೆ ಬದಲಾಯಿಸಲಾಗಿದೆ.
ಎಲೆಕ್ಟ್ರಿಕ್ ಲೋಕೋಮೋಟಿವ್ ಇಂಜಿನ್ನೊಂದಿಗೆ ಜನ ಶತಾಬ್ದಿ ರೈಲು ನಿನ್ನೆ ಕೆಎಸ್ಆರ್ ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ತನ್ನ ಮೊದಲ ಸಂಚಾರವನ್ನು ಆರಂಭಿಸಿತು.
ರೈಲ್ವೆ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ
ಎಲೆಕ್ಟ್ರಿಕ್ ಲೋಕೋಮೋಟಿವ್ ಇಂಜಿನ್ ಗೆ ಬದಲಿಸಿರುವ ಕಾರಣ ಇಲಾಖೆಗೆ ಈ ರೈಲಿನಿಂದ ಪ್ರತಿ ಒಂದು ಬಾರಿಯ ಓಡಾಟಕ್ಕೆ 2,500 ಲೀಟರ್ ಡೀಸೆಲ್ ಉಳಿತಾಯವಾಗಲಿದೆ. ಆ ಮೂಲಕ ಪ್ರತಿ ತಿಂಗಳಿಗೆ 40 ಲಕ್ಷ ರೂಪಾಯಿ ಉಳಿತಾಯವಾಗಲಿದೆ.
ಜೊತೆಗೆ ಯಶವಂತಪುರ-ಶಿವಮೊಗ್ಗಟೌನ್-ಯಶವಂತಪುರ ಎಕ್ಸ್ಪ್ರೆಸ್ ರೈಲಿನ ಇಂಜಿನ್ನನ್ನೂ ಕೂಡಾ ಎಲೆಕ್ಟ್ರಿಕ್ ಇಂಜಿನ್ ಆಗಿ ಬದಲಾಯಿಸಲಾಗಿದೆ.
ಈ ಮಾರ್ಪಾಡಿನಿಂದ ಇಲಾಖೆಗೆ ಪ್ರತಿ ದಿನ 2,500 ಲೀಟರ್ನಷ್ಟು ಡೀಸೆಲ್ ಮೂಲಕ ಪ್ರತಿ ತಿಂಗಳಿಗೆ 35 ಲಕ್ಷ ರೂಪಾಯಿ ಉಳಿತಾಯವಾಗಲಿದೆ ಎಂದು ಇಲಾಖೆ ಹೇಳಿದೆ.
ADVERTISEMENT
ADVERTISEMENT