ವೆಸ್ಟ್ ಇಂಡೀಸ್ ವಿರುದ್ಧದ 3 ಏಕದಿನ ಪಂದ್ಯಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತದ ತಂಡ ಘೋಷಿಸಿದೆ. ಈ ತಂಡಕ್ಕೆ ಕ್ರಿಕೆಟ್ನ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಜುಲೈ 22 ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ ಪಂದ್ಯ(50 ಓವರ್)ಕ್ಕೆ 16 ಜನರ ತಂಡ ಪ್ರಕಟವಾಗಿದೆ.
ರೋಹಿತ್ ಸಿಂಗ್, ವಿರಾಟ್ ಕೊಹ್ಲಿ, ರಿಷಬ್ ಪಂತ್ ಹಾಗೂ ಜಸ್ಪ್ರಿತ್ ಬುಮ್ರಾಗೆ ವಿರಾಮ (ರೆಸ್ಟ್) ನೀಡಲಾಗಿದೆ.
ಶಿಖರ್ ಧವನ್ ಗೆ ಈ ತಂಡದ ನಾಯಕತ್ವ ನೀಡಲಾಗಿದ್ದು, ರವೀಂದ್ರ ಜಡೇಜಾ ಉಪನಾಯಕನಾಗಿಗಿದ್ದಾರೆ. ಯುವ ಆಟಗಾರರಾದ ದೀಪಕ್ ಹುಡಾ, ಹರ್ಷದೀಪ್ ಸಿಂಗ್, ಆವೇಶ್ ಖಾನ್ ಮತ್ತು ಪ್ರಸಿದ್ದ್ ಕೃಷ್ಣ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಂಡ ಇಂತಿದೆ :
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ದೀಪಕ್ ಹುಡಾ, ಸೂರ್ಯಕಾಂತ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶಾನ್(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೇಂದ್ರ ಜಡೇಜ (ಉಪ ನಾಯಕ), ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಅಕ್ಸರ್ ಪಟೇಲ್, ಆವೇಶ್ ಕಾನ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ಹರ್ಷದೀಪ್ ಸಿಂಗ್.