2023 ರಲ್ಲಿ ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಪಟ್ಟುಯಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಲಿದೆ ಎಂದು ವಿಶ್ವಸಂಸ್ಥೆ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ. 2022 ರ ನವೆಂಬರ್ ತಿಂಗಳ ಮಧ್ಯದ ವೇಳೆಗೆ ವಿಶ್ವದ ಜನಸಂಖ್ಯೆ 800 ಕೋಟಿ ( 8 ಬಿಲಿಯನ್) ತಲುಪಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳಲ್ಲಿನ ಜನಸಂಖ್ಯಾ ವಿಭಾಗವು ವಿಶ್ವ ಜನಸಂಖ್ಯೆ ನಿರೀಕ್ಷೆ 2022 ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಇದೇ ನವೆಂಬರ್ 15 ರ ವೇಳೆಗೆ ವಿಶ್ವ ಜನಸಂಖ್ಯೆ 800 ಕೋ. ತಲುಪಲಿದೆ ಎಂದು ಹೇಳಲಾಗಿದೆ.
2020 ರಲ್ಲಿ ಜನಸಂಖ್ಯೆ ಬೆಳವಣಿಗೆ 1 ಪ್ರತಿಶತ ಕುಸಿದಿದೆ. ವಿಶ್ವ ಜನಸಂಖ್ಯೆ 2030 ರ ವೇಳೆಗೆ 850 ಕೋಟಿ ಜನಸಂಖ್ಯೆ ಮತ್ತು 2019 ರ ವೇಳೆಗೆ 970 ಕೋಟಿ 2080 ರ ವೇಳೆಗೆ 1040 ಕೋ. ಜನಸಂಖ್ಯೆ ತಲುಪಲಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಅಂದಾಜಿಸಲಾಗಿದೆ.
ಈ ವರ್ಷದ ವಿಶ್ವ ಜನಸಂಖ್ಯಾ ದಿನ (ಜುಲೈ 11) ಒಂದು ಮೈಲಿಗಲ್ಲಿನ ಸಮಯದಲ್ಲಿ ಬರುತ್ತದೆ. ಈ ವರ್ಷ ನಾವು 80 ಕೋಟಿ ಮಕ್ಕಳ ಜನನಕ್ಕಾಗಿ ಕಾಯುತ್ತಿದ್ದೇವೆ. ಇದು ನಮ್ಮಲ್ಲಿನ ಆರೋಗ್ಯ ಪ್ರಗತಿಯನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಕ್ಕಳ ಮರಣದರವನ್ನು ಕಡಿಮೆ ಮಾಡಿಕೊಳ್ಳುವ ಸಮಯವಾಗಿದೆ ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿ ಆ್ಯಂಟಿನಿಯೋ ಗುಟೆರಸ್ ಹೇಳಿದ್ದಾರೆ.
ಇದೇ ಸಮಯದಲ್ಲಿ ಮಾತನಾಡಿರುವ ಅವರು, ನಮ್ಮ ಗ್ರಹದ ರಕ್ಷಣೆಯ ಜವಾಬ್ದಾರಿಯನ್ನು ಹಂಚಿಕೊಳ್ಳುವ ಸಮಯದ ಸೂಚಕವಾಗಿದ ಎಂದು ಹೇಳಿದರು.
ಭಾರತವು 2023 ರ ವೇಳೆಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಚೀನಾವನ್ನು ಮೀರಿಸುತ್ತದೆ. 2022 ರಲ್ಲಿ ವಿಶ್ವದ ಎರಡು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳೆಂದರೆ ಪೂರ್ವ ಮತ್ತು ಆಗ್ನೇಯ ಏಷ್ಯಾ, 230 ಕೋಟಿ ಜನರು, ಜಾಗತಿಕ ಜನಸಂಖ್ಯೆಯ 29 ಪ್ರತಿಶತವನ್ನು ಪ್ರತಿನಿಧಿಸುತ್ತಾರೆ ಮತ್ತು ಮಧ್ಯ ಮತ್ತು ದಕ್ಷಿಣ ಏಷ್ಯಾ, 210 ಶತಕೋಟಿಯೊಂದಿಗೆ ಒಟ್ಟು ವಿಶ್ವದ ಜನಸಂಖ್ಯೆಯ 26 ಪ್ರತಿಶತವನ್ನು ಪ್ರತಿನಿಧಿಸುತ್ತದೆ.
2022 ರಲ್ಲಿ ಭಾರತದ ಜನಸಂಖ್ಯೆ 141 ಕೋಟಿಯಾಗಿದ್ದಾರೆ, ಚೀನಾದ ಜನಸಂಖ್ಯೆ 142 ಕೋ. ಆಗಿರಲಿದೆ. 2023 ರ ವೇಳೆಗೆ ಭಾರತ ಚೀನಾದ ಜನಸಂಖ್ಯೆಯನ್ನು ಮೀರಿಸಲಿದೆ. 2050 ರ ವೇಳೆಗೆ ಭಾರತದ ಜನಸಂಖ್ಯೆ 166 ಕೋ. ಹಾಗೂ ಚೀನಾದ ಜನಸಂಖ್ಯೆ 1.31 ಕೋಟಿ ಆಗಿರಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.