INDIA: ಮೈತ್ರಿಕೂಟಕ್ಕೆ ಇಂಡಿಯಾ ಹೆಸರು – ವಿಪಕ್ಷಗಳು, ಚುನಾವಣಾ ಆಯೋಗಕ್ಕೆ ದೆಹಲಿ ಹೈಕೋರ್ಟ್​ ನೋಟಿಸ್​

26 ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ದೆಹಲಿ ಹೈಕೋರ್ಟ್​ನ ವಿಭಾಗೀಯ ಪೀಠ ನೋಟಿಸ್​ ನೀಡಿದೆ.

ಮೈತ್ರಿಕೂಟಕ್ಕೆ ಇಂಡಿಯಾ ಎಂಬ ಹೆಸರನ್ನು ಇಡದಂತೆ ಮತ್ತು ಬಳಸದಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸತೀಶ್​ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜಯ್​ ನುರುಲಾ ಪೀಠ ಮಾನ್ಯ ಮಾಡಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಉತ್ತರ ನೀಡುವಂತೆ 26 ವಿಪಕ್ಷಗಳು ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್​ ನೀಡಿದೆ.

ಗಿರೀಶ್​ ಭಾರಧ್ವಜ್​ ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ತಮ್ಮ ಸ್ವಾರ್ಥಕ್ಕಾಗಿ ಇಂಡಿಯಾ ಎಂಬ ಹೆಸರನ್ನು ವಿಪಕ್ಷಗಳು ಬಳಸಿಕೊಳ್ಳುತ್ತಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ, ಮುಕ್ತ ಮತ್ತು ಪಾರದರ್ಶಕ ಚುನಾವಣೆಗೆ ಅಡ್ಡಿಯಾಗಲಿದೆ. ಇದು ಜನರನ್ನು ಹಿಂಸೆಯ ಪರಿಣಾಮಕ್ಕೆ ದೂಡಬಹುದು ಮತ್ತು ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲಿದೆ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.

ಮೈತ್ರಿಕೂಟಕ್ಕೆ ಇಂಡಿಯಾ ಎಂಬ ಹೆಸರಿಟ್ಟಿದ್ದು ಚಿಹ್ನೆ ಮತ್ತು ಹೆಸರುಗಳ ದುರ್ಬಳಕೆ ತಡೆ ಕಾಯ್ದೆಯ ಕಲಂ 2 ಮತ್ತು 3ರ ಉಲ್ಲಂಘನೆ ಎಂದೂ ವಾದಿಸಲಾಗಿದೆ.

LEAVE A REPLY

Please enter your comment!
Please enter your name here