Imran Hashmi : ಬಾಲಿವುಡ್ ನಟನ ಮೇಲೆ ಕಾಶ್ಮೀರದಲ್ಲಿ ಕಲ್ಲು ತೂರಾಟ

Imran Hashmi

ಬಾಲಿವುಟ್ ನಟ ಇಮ್ರಾನ್ ಹಶ್ಮಿಯವರು (Imran Hashmi) ತಮ್ಮ ಗ್ರೌಂಡ್ ಜೀರೋ ಚಿತ್ರದ ಚಿತ್ರೀಕರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದರು. ಈ ವೇಳೆ ನಟನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಶೂಟಿಂಗ್ ಮುಗಿಸಿ ಪಹಲ್ಗಾಮ್ ಮುಖ್ಯ ಮಾರುಕಟ್ಟೆಗೆ ಹೋದಾಗ ಅಪರಿಚಿತರು ಇಮ್ರಾನ್​ ಹಸ್ಮಿ ಮೇಲೆ ಕಲ್ಲು ಎಸೆದಿದ್ದಾರೆ ಎನ್ನಲಾಗಿದೆ. ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಸೆಕ್ಷನ್ 147, 148, 370, 336, 323 ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಗ್ರೌಂಡ್ ಜೀರೋ ಚಿತ್ರವನ್ನು ತೇಜಸ್ ದಿಯೋಸ್ಕರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ (Imran Hashmi) ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯ ತನಕ ಪೊಲೀಸರು ಯಾರನ್ನು ಬಂದಿಸಿಲ್ಲ ಎಂದು ಹೇಳಿದ್ದಾರೆ.

ಸಿಸಿ ಕ್ಯಾಮೆರಾ ಪರಿಶೀಲನೆ ಮಾಡುಲಾಗುತ್ತಿದ್ದು ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದಾರೆ. ಈ ಸಂಬಂಧ ಪಹಲ್ಗಾಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಟ್ರೋಲಿಗರಿಗೆ ‘ಬ್ರಹ್ಮಾಸ್ತ್ರ’ವಾದ ಆಲಿಯಾ ಮಾತು – ಮತ್ತೊಂದು ‘ಫ್ಲಾಪ್ ಬಸ್ಟರ್’ ಖಚಿತನಾ?

LEAVE A REPLY

Please enter your comment!
Please enter your name here