ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಅಕ್ರಮ​: ನಿವೃತ್ತ ಡಿವೈಎಸ್​ಪಿ ಪುತ್ರನಿಗೆ ಜೈಲು ಶಿಕ್ಷೆ ಪ್ರಕಟ

ಹುಬ್ಬಳ್ಳಿ: ಧಾರವಾಡದ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದ್ದ ನಕಲಿ ವಿದ್ಯಾರ್ಥಿ ಪರೀಕ್ಷೆ ಬರೆದ ಪ್ರಕರಣದ ಆರೋಪಿಗಳಿಗೆ ಇಂದು ನ್ಯಾಯಾಲಯ​ ಶಿಕ್ಷೆ ಪ್ರಕಟಿಸಿದೆ.

ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 2008ರಲ್ಲಿ ಅಸಲಿ ವಿದ್ಯಾರ್ಥಿ ಜಾಫರ್ ಖಾನ್ ತಡಕೋಡ ಬದಲು, ನಕಲಿ ವಿದ್ಯಾರ್ಥಿ ಪ್ರಶಾಂತ ಬಡಿಗೇರ ಪರೀಕ್ಷೆ ಬರೆಯಲು ಮುಂದಾಗಿದ್ದರು. ಪರೀಕ್ಷೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದು, ಪ್ರಾಂಶುಪಾಲರು ಈ ಅಕ್ರಮದ ಬಗ್ಗೆ ದೂರು ದಾಖಲಿಸಿದ್ದರು.

ದಾಖಲೆಗಳನ್ನು ನಕಲು ಮಾಡಿ ಹಾಗೂ ನಕಲಿ ಸಹಿ ಮಾಡಿ ಪರೀಕ್ಷೆ ಬರೆದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಧಾರವಾಡ ಮೂರನೇ ಜೆಎಂಎಫ್​ಸಿ ಕೋರ್ಟ್​ ಇಬ್ಬರು ಆರೋಪಿಗಳಿಗೆ ತಲಾ ಆರು ತಿಂಗಳು ಜೈಲು ಶಿಕ್ಷೆ ಹಾಗೂ 1,000 ರೂಪಾಯಿ ದಂಡ ವಿಧಿಸಿದೆ.

ಇನ್ನು ಅಸಲಿ ವಿದ್ಯಾರ್ಥಿ ಜಾಫರ್ ತಡಕೋಡ ನಿವೃತ್ತಿ ಪೊಲೀಸ್ ಅಧಿಕಾರಿಯ ಪುತ್ರ ಎನ್ನುವ ಮಾಹಿತಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here