ನಾನು ಕೃಷ್ಣ ಅಲ್ಲ, ಆದ್ರೆ ನನ್ನನ್ನು ಜೈಲಿನಲ್ಲಿಡುವುದಾದ್ರೆ..! – ಬಿಜೆಪಿ ನಾಯಕರಿಗೆ ಸಿಎಂ ಠಾಕ್ರೆ ಹೇಳಿದ್ದೇನು..?

`ನಾನು ಕೃಷ್ಣ ಅಲ್ಲ, ಆದ್ರೆ ನೀವು ಕಂಸ ಅಲ್ಲ ಎಂದು ಹೇಳಬಲ್ಲೀರಾ..? ನೀವು ನನ್ನ ಕುಟುಂಬದ ಮೇಲೆ ದಾಳಿ ಮಾಡುತ್ತಿದ್ದೀರಿ ಮತ್ತು ನನ್ನನ್ನು ಜೈಲಿನಲ್ಲಿಡಲು ಬಯಸಿದ್ದೀರಿ’. ಇದು ಮಹಾರಾಷ್ಟç ಸಿಎಂ ಉದ್ಧವ್ ಠಾಕ್ರೆ ಬಿಜೆಪಿ ನಾಯಕರ ವಿರುದ್ಧ ವಿಧಾನಸಭೆಯಲ್ಲಿ ನಡೆಸಿದ ವಾಗ್ದಾಳಿ.

ಕೆಲ ದಿನಗಳ ಹಿಂದೆಯಷ್ಟೇ ಜಾರಿ ನಿರ್ದೇಶನಾಲಯ ಸಿಎಂ ಠಾಕ್ರೆ ಭಾಮೈದನ ಆಸ್ತಿ-ಪಾಸ್ತಿಗಳ ಮೇಲೆ ದಾಳಿ ನಡೆಸಿ 6.45 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಪ್ತಿ ಮಾಡಿಕೊಂಡಿತ್ತು.

`ನೀವು ಅಧಿಕಾರಕ್ಕೆ ಬರಲು ಬಯಸಿದ್ದರೆ ಅಧಿಕಾರಕ್ಕೆ ಬನ್ನಿ. ಆದ್ರೆ ಅಧಿಕಾರಕ್ಕೆ ಬರಲು ಇಂತಹ ಕೆಲಸಗಳನ್ನೆಲ್ಲ ಮಾಡ್ಬೇಡಿ. ನಮ್ಮನ್ನಾಗಲೀ ಅಥವಾ ಯಾರೊಬ್ಬರ ಕುಟುಂಬ ಸದಸ್ಯರನ್ನಾಗಲೀ ಪೀಡಿಸಬೇಡಿ. ನಿಮ್ಮ ಕುಟುಂಬಸ್ಥರಿಗೆ ನಾವು ಕಿರುಕುಳ ಕೊಟ್ಟಿಲ್ಲ. ಒಂದು ವೇಳೆ ನಿಮಗೆ ನಮ್ಮನ್ನು ಜೈಲಿನಲ್ಲಿಡಬೇಕು ಎಂದು ಬಯಕೆಯಿದ್ದಲ್ಲಿ, ಅಧಿಕಾರಕ್ಕೆ ಬಂದು ನಮ್ಮನ್ನು ಜೈಲಿನಲ್ಲಿಡಿ’ ಎಂದು ಬಿಜೆಪಿ ನಾಯಕರಿಗೆ ಭಾವನಾತ್ಮಕ ಮನವಿ ಮಾಡಿದರು.

LEAVE A REPLY

Please enter your comment!
Please enter your name here