ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದರೆ ತಲೆ ಬೀಳುತ್ತದೆ – ಜಗ್ಗೇಶ್

Jaggesh

ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತನೇ ಮೊಟ್ಟೆ ಎಸೆದಿದ್ದಾನೆ. ಇನ್ನು ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದರೆ ಹೆಣ ಬೀಳುತ್ತದೆ ಎಂದು ಹಾಸ್ಯನಟ ಹಾಗೂ ಬಿಜೆಪಿ ರಾಜ್ಯ ಸಭಾ ಸಂಸದ ಜಗ್ಗೇಶ್ ( Jaggesh ) ಹೇಳಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೋರಾಟ ಮುಂದಿನ ಜೂನ್​ವರೆಗೂ ಇರಬಹುದು. ಆ ಮೇಲೆ ಎಲ್ಲಾ ಮುಗಿಯುತ್ತದೆ. ರಾಜ್ಯದ ಜನತೆಗೆ ಗೊತ್ತಿದೆ ಯಾಕೆ ಈಗ ಪ್ರತಿಭಟನೆಗಳು ಆಗುತ್ತಿದೆ ಎಂದು. ಪ್ರತಿಯೊಬ್ಬರಿಗೂ ಆ ಜಾಗ ಹಿಡಿಬೇಕು ಎಂಬ ಹುಮ್ಮಸಿದೆ ಎಂದರು.

ಇದನ್ನೂ ಓದಿ : ‘ರಾಯರ’ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ನಟ ಜಗ್ಗೇಶ್

ಇನ್ನು ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದರೆ ಹೆಣ ಬೀಳುತ್ತದೆ. ಪ್ರತಿಭಟನೆ ಅವಕಾಶ ಕೊಟ್ಟು ಹೆಣ ಬಿದ್ದು ದೊಡ್ಡ ಗಲಾಟೆಯಾಗಲು ಯಾಕೆ ಅವಕಾಶ ನೀಡಬೇಕು. ಎಷ್ಟು ಕೊಲೆ‌ ನಡೆದಿದೆ ಗೊತ್ತೇ ಇದೆ. ಕೇರಳ ಗಡಿ ದಾಟಿ ಬಂದು ಕೊಲೆ ಮಾಡುತ್ತಾರೆ ಹೀಗಾಗಿ ಈ ಇಂತಹ ಘಟನೆಗಳು ಸಂಭವಿಸಿದಂತೆ ತಡೆಯಬೇಕು ಎಂದು ರಾಜ್ಯಸಭಾ ಸಂಸದ ಜಗ್ಗೇಶ್( Jaggesh ) ಹೇಳಿದ್ದಾರೆ.

LEAVE A REPLY

Please enter your comment!
Please enter your name here