ಐಸಿಎಸ್ಸಿಯ 10 ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಇಂದು ಭಾನುವಾರ ಸಾಯಂಕಾಲ 5 ಗಂಟೆಗೆ ಪ್ರಕಟವಾಗಿದೆ.
ಐಸಿಎಸ್ಸಿ 10 ನೇ ತರಗತಿಯಲ್ಲಿ ಶೇ.99.97 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿಯರೇ ಅಲ್ಪ ಪ್ರಮಾಣದ ಮೇಲುಗೈ ಸಾಧಿಸಿದ್ದು ಶೇ.99.98 ರಷ್ಟು ಜನ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳು ಉತ್ತೀರ್ಣ ಪ್ರಮಾಣ ಶೇ. 99.97 ರಷ್ಟಿದೆ.
ಈ ಫಲಿತಾಂಶದಲ್ಲಿ ಪಶ್ಚಿಮ ಮತ್ತು ದಕ್ಷಿಣ ಭಾರತದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಪರಿಶಿಷ್ಠ ವರ್ಗಗಳ ಶೇ. 99.97% ರಷ್ಟು ವಿದ್ಯಾರ್ಥಿಗಳು, ಪರಿಶಿಷ್ಟ ಪಂಗಡಗಳ ಶೇ. 99.94% ರಷ್ಟು ವಿದ್ಯಾರ್ಥಿಗಳು, ಹಿಂದುಳಿದ ವರ್ಗಗಳ ಶೇ. 99.99% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಐಸಿಎಸ್ಸಿ ಬೋರ್ಡ್ ನಡೆಸಿದ 61 ವಿಷಯಗಳ ಪರೀಕ್ಷೆಯನ್ನು 2.31.063 ವಿದ್ಯಾರ್ಥಿಗಳು ಬರೆದಿದ್ದಾರೆ. ಇದರಲ್ಲಿ ಬಾಲಕರು 125,635 ಮತ್ತು ಬಾಲಕಿಯರು 105,369 ಜನ ಇದ್ದಾರೆ.
ಹರ್ಗುನ್ ಕೌರ್ ಮಥಾರು, ಅನಿತಾ ಗುಪ್ತ, ಪುಷ್ಕರ್ ತ್ರಿಪಾಟಿ, ಕನಿಷ್ಕ ಮಿತ್ತಲ್ ಎಂಬ ನಾಲ್ಕು ಜನ ವಿದ್ಯಾರ್ಥಿಗಳು 99.80 ಪ್ರತಿಶತ ಅಂಕ ಪಡೆದು ಮೊದಲಿಗರಾಗಿ ಹೊರಹೊಮ್ಮಿದ್ದಾರೆ.