ಐಸಿಸಿ ಬಿಡುಗಡೆ ಮಾಡಿದ ವಾರ್ಷಿಕ ಶ್ರೇಯಾಂಕದಲ್ಲಿ ಟಿ20 ಸರಣಿಯಲ್ಲಿ ಭಾರತವು ತನ್ನ ತವರಿನಲ್ಲಿ ನೀಡಿದ ಪ್ರದರ್ಶನ ಮೂಲಕ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ರೋಹಿತ್ ಶರ್ಮಾ ನೇತೃತ್ವದ ತಂಡ ಆಸ್ಟ್ರೇಲಿಯಾವನ್ನು 9 ಅಂಕಗಳಿಂದ ಹಿಂದಿಕ್ಕಿ ಮೊದಲನೇ ಸ್ಥಾನವನ್ನು ಅಲಂಕರಿಸಿದೆ. ಇನ್ನು ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದೆ. ಆಸ್ಟ್ರೇಲಿಯಾವು ಟೆಸ್ಟ್ ಕ್ರಿಕೆಟಿನಲ್ಲಿ ಮೊದಲ ಸ್ಥಾನ ಗಳಿಸಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ 119 ರೇಟಿಂಗ್ ಪಡೆದುಕೊಳ್ಳುವ ಮೂಲಕ 128ನೇ ರೇಟಿಂಗ್ ಪಡೆದ ಆಸ್ಟ್ರೇಲಿಯಾಕ್ಕೆ ಮೊದಲ ಸ್ಥಾನ ಬಿಟ್ಟುಕೊಟ್ಟಿದೆ. ಮೊದಲ ಐದು ಸ್ಥಾನಗಳಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಪಡೆದುಕೊಂಡಿದೆ.
ಇನ್ನು ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ 125ನೇ ರೇಟಿಂಗ್ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಭಾರತ 105 ರೇಟಿಂಗ್ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಎರನೇ ಮತ್ತು ಮೂರನೇ ಸ್ಥಾನವನ್ನು ಅನುಕ್ರಮವಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪಡೆದುಕೊಂಡಿದೆ.
ಟಿ20 ನಲ್ಲಿ ಮೊದಲ ಸ್ಥಾನ ಕಬಳಿಸಿರುವ ಭಾರತ ಇದುವರೆಗೆ 30 ಪಂದ್ಯಗಳಲ್ಲಿ 270 ರೇಟಿಂಗ್ ಗಳಿಸಿದೆ. ಎರಡನೇ ಸ್ಥಾನ ಇಂಗ್ಲೆಂಡ್, ಮೂರನೇ ಸ್ಥಾನ ಪಾಕಿಸ್ತಾನ, ನಾಲ್ಕನೇ ಸ್ಥಾನ ದಕ್ಷಿಣ ಆಫ್ರಿಕಾ, ಐದನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದೆ.