ಕರ್ನಾಟಕ ಸರ್ಕಾರದಿಂದ 14 IAS ಅಧಿಕಾರಿಗಳ ವರ್ಗಾವಣೆ

Karnataka Vidhanasoudha
Karnataka Vidhanasoudha

ಹುದ್ದೆಗಾಗಿ ಕಾಯುತ್ತಿದ್ದ ನವೀನ್​ರಾಜ್​ ಸಿಂಗ್ ಅವರನ್ನು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.

ಉಜ್ವಲ್​ ಕುಮಾರ್​ ಘೋಷ್​: ಬಿಬಿಎಂಪಿ (ಚುನಾವಣೆ) ವಿಶೇಷ ಆಯುಕ್ತರಾಗಿದ್ದ ಇವರನ್ನು ಭೂ ಸ್ವಾಧೀನ ಮತ್ತು ಪುರ್ನವಸತಿ ನಿಗಮ, ಬಾಗಲಕೋಟೆ ಇದರ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.

ಹುದ್ದೆಗಾಗಿ ಕಾಯುತ್ತಿದ್ದ ಸುಷ್ಮಾ ಗೋಡ್ಬೋಲೆ ಇವರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖ್ಯ ಪರೀಕ್ಷಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಯಶವಂತ್​ ವಿ ಗುರ್ಕರ್​: ಹುದ್ದೆಗಾಗಿ ಕಾಯುತ್ತಿದ್ದ ಇವರನ್ನು ಸ್ಮಾರ್ಟ್​ ಆಡಳಿತ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.

ರಮೇಶ್​ ಡಿ ಎಸ್​: ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಇವರನ್ನು ತೋಟಗಾರಿಕೆ ಇಲಾಖೆ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.

ಪೊಮ್ಮಲ ಸುನಿಲ್​ ಕುಮಾರ್​: ಹುದ್ದೆಗಾಗಿ ಕಾಯುತ್ತಿದ್ದ ಇವರನ್ನು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.

ಡಾ ಸತೀಶ್​ ಬಿ ಸಿ: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್​ ಇದರ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಇವರನ್ನು ಆಡಳಿತಾತ್ಮಕ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ.

ಡಾ ಗೋಪಾಲಕೃಷ್ಣ ಹೆಚ್​ ಎನ್​: ಕರ್ನಾಟಕ ಪೌರಾಡಳಿತ ಡಾಟಾ ಸೊಸೈಟಿ ಇದರ ಜಂಟಿ ನಿರ್ದೇಶಕರಾಗಿದ್ದ ಇವರನ್ನು ಕಾರ್ಮಿಕ ಇಲಾಖೆ ಅಯುಕ್ತರನ್ನಾಗಿ ವರ್ಗಾಯಿಸಲಾಗಿದೆ.

ಹುದ್ದೆಗಾಗಿ ಕಾಯುತ್ತಿದ್ದ ರವಿ ಕುಮಾರ್​ ಎಂ ಆರ್​ ಇವರನ್ನು ಮೈಸೂರು ಶುಗರ್​ ಕಂಪನಿ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.

ಮೀನಾ ನಟರಾಜನ್​ ಸಿ ಎನ್​: ಮಾಹಿತಿ ತಂತ್ರಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ಇವರನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಡಾ ಆನಂದ್​ ಕೆ: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಆಗಿದ್ದ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಜಯವಿಭವಸ್ವಾಮಿ: ಚೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಇವರನ್ನು ಕರ್ನಾಟಕ ರಾಜ್ಯ ಗಣಿ ನಿಗಮದ ಎಂಡಿಯಾಗಿ ವರ್ಗಾಯಿಸಲಾಗಿದೆ.

ಪ್ರಭು ಜಿ: ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾಗಿದ್ದ ಇವರನ್ನು ತುಮಕೂರು ಜಿಲ್ಲಾ ಪಂಚಾಯತ್​ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಉಕೇಶ್​ ಕುಮಾರ್​: ಕೋಲಾರ ಜಿಲ್ಲಾ ಪಂಚಾಯತ್​ ಸಿಇಒ ಆಗಿದ್ದ ಇವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.