`ಬಿಜೆಪಿ ಬಿ ಟೀಂ ಎಂದರೂ ಪರ್ವಾಗಿಲ್ಲ, ಮುಂದಿನ ಮುಖ್ಯಮಂತ್ರಿ ನಾನೇ’ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಿದ್ದ ಬಳಿಕ ಇದೇ ಮೊದಲ ಬಾರಿಗೆ ಕುಮಾರಸ್ವಾಮಿಯವರು `ನಾನೇ ಮುಖ್ಯಮಂತ್ರಿ’ ಎಂಬ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ.
ಪ್ರತಿಕ್ಷಣನ್ಯೂಸ್ ವೆಬ್ಸೈಟ್ ಮತ್ತು ರಾಧಿಕಾ ಮೀಡಿಯಾ ನಡೆಸಿರುವ ಜಂಟಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ದೊಡ್ಡ ಮಟ್ಟದಲ್ಲಿ ಸೀಟು ನಷ್ಟ ಆಗಲಿದೆ ಎಂಬ ಅಂದಾಜಿನ ಬೆನ್ನಲ್ಲೇ ಕುಮಾರಸ್ವಾಮಿ ಅವರ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದಿದೆ.
ತುಮಕೂರಲ್ಲಿ ನಡೆದ ಕುಂಚಿಟಿಗ ಒಕ್ಕಲಿಗರ ಸಮಾವೇಶದಲ್ಲಿ ಮಾತಾಡಿದ ಹೆಚ್ಡಿಕೆ `2023ಕ್ಕೆ ನಾನು ಮುಖ್ಯಮಂತ್ರಿ ಆಗ್ತೀನಿ. ಸ್ವಾಮೀಜಿಗಳು ಮತ್ತು ಜನರ ಆರ್ಶೀವಾದಿಂದ ನಾನು ಮತ್ತೆ ಸಿಎಂ ಆಗ್ತೀನಿ’ ಎಂದು ಕಾರ್ಯಕ್ರಮದಲ್ಲಿ ಪದೇ ಪದೇ ಹೇಳಿದರು.
`ನನ್ನನ್ನು ಬಿಜೆಪಿ ಬಿ ಟೀಂ ಎಂದರೂ ರ್ವಾಗಿಲ್ಲ. ನನ್ನ ಜೊತೆಗೆ ಸಿಎಂ ಬೊಮ್ಮಾಯಿವರು ಚೆನ್ನಾಗಿದ್ದಾರೆ. ಬಿಜೆಪಿ ನಾಯಕರಿಗೆ ಹೇಳಿಸಿ ಕುಂಚಿಟಿಗ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಮನವಿ ಮಾಡ್ತೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.