ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ಸ್ವಾಗತಿಸುತ್ತೇನೆ – ಡಿಕೆ ಶಿವಕುಮಾರ್

ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಯನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಭಗವದ್ಗೀತೆ ನಮ್ಮ ದೇಶದ ಅಸ್ಮಿತೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಧರ್ಮ ಗ್ರಂಥವನ್ನ ಪಠ್ಯದಲ್ಲಿ ಅಳವಡಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ಇಡೀ ದೇಶಕ್ಕೆ ರಾಮಾಯಣ, ಮಹಾಭಾರತ ಪರಿಚಯ ಮಾಡಿಕೊಟ್ಟಿದ್ದೆ ಕಾಂಗ್ರೆಸ್. ದೂರದರ್ಶನದ ಮೂಲಕ ಭಗವದ್ಗೀತೆಯನ್ನು ಪ್ರಚಾರ ಮಾಡಿದ್ದು ನಮ್ಮ ಪಕ್ಷ. ಇದರ ಜೊತೆಗೆ ದೇಶದ ಎಲ್ಲಾ ಧರ್ಮವನ್ನ ಕಾಂಗ್ರೆಸ್ ಗೌರವಿಸಿತ್ತದೆ ಎಂದಿದ್ದಾರೆ. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ

ಇದೇ ವೇಳೆ ನಮ್ಮ ನಿರೀಕ್ಷೆಯಷ್ಟು ಡಿಜಿಟಲ್ ಸದಸ್ಯತ್ವ ಮಾಡಿಸುತ್ತೇವೆ. ಇನ್ನೂ 7 ದಿನ ಸಮಯ ಇದೆ. ನಾವು ನಿರೀಕ್ಷೆ ರೀಚ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here