ನನ್ನ ಆಹಾರ ಪದ್ಧತಿಯ ಬಗ್ಗೆ ನೀನ್ ಯಾವನ್ಯ್ಯ ಕೇಳೋಕೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿವಿ ಪತ್ರಕರ್ತನಿಗೆ ಬಿಸಿ ಮುಟ್ಟಿಸಿದ ಬಳಿಕ ಈಗ ಯತೀಂದ್ರ ಸಿದ್ದರಾಮಯ್ಯ ಕೂಡಾ ಟ್ವೀಟಿಸಿದ್ದಾರೆ.
ನಾನು ಸಂಪೂರ್ಣ ಶಾಕಾಹಾರಿ, ತಂದೆಯವರು ಮಾಂಸಾಹಾರಿ. ಶಾಕಾಹಾರಿಯೋ, ಮಾಂಸಾಹಾರಿಯೋ ಎಲ್ಲರೊಳಗಿನ ಪರಮಾತ್ಮ ಒಬ್ಬನೇ, ಆತನಿಗಿಲ್ಲದ ಭೇದ ಭಾವ ನಮಗೇಕೆ. ನನ್ನ ಆಹಾರ ನನ್ನ ಆಯ್ಕೆ
ಎಂದು ಸಿದ್ದರಾಮಯ್ಯ ಅವರ ಪುತ್ರ ಮತ್ತು ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಟ್ವೀಟಿಸಿದ್ದಾರೆ.
ಅಲ್ಲದೇ ಮಂಜುನಾಥ್ ಜವರನಹಳ್ಳಿ ಅವರ ಟ್ವಿಟ್ಟರ್ ಖಾತೆಯಲ್ಲಿ ಹಾಕಲಾಗಿರುವ ದೃಶ್ಯವೊಂದನ್ನು ರಿ ಟ್ವೀಟಿಸಿದ್ದಾರೆ.
ಆ ವೀಡಿಯೋದಲ್ಲಿ ದೇವಿಯ ಮುಂದೆ ಬಾಲ ಭಕ್ತ ಕೋಳಿ ಕುರಿ ಕೂಯ್ತೀನಿ ಓತ ನ ಕಡಿತಿನಿ ಬಾರವ್ವ ಗುಡಿಗೆ ಹೋಗಣ….
ಎಂದು ಹಾಡಿ ತಮಟೆ ಬಾರಿಸುತ್ತಿರುವ ವೀಡಿಯೋ ಇದಾಗಿದೆ.
https://twitter.com/manjujb1/status/1561396649674539011?s=20&t=OuhopzDpgyHmML4n9vGKWw