ಹೈದ್ರಾಬಾದ್ ನಲ್ಲಿ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಮೇ 28 ರಂದು ಪಾರ್ಟಿ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ 17 ವರ್ಷದ ಹುಡುಗಿ ಮೇಲೆ ಗ್ಯಾಂಗ್ ರೇಪ್ ನಡೆದ ಬೆನ್ನಲ್ಲೇ, ಮತ್ತೊಂದು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮೇ 31 ರಂದು ಬಾಲಕಿ ನಾಪತ್ತೆಯಾದ ನಂತರ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 363ರ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ನಂತರ ಪೊಲೀಸರ ತಂಡ ಗಸ್ತು ತಿರುಗುವಾಗ ಬಾಲಕಿಯನ್ನು ಪತ್ತೆ ಪಚ್ಚಿದೆ. ಕ್ಯಾಬ್ ಡ್ರೈವರ್ ಗಳಾದ ಶೇಕ್ ಕಲೀಂ ಆಲಿ ಮತ್ತು ಮೊಹಮ್ಮದ್ ಲ್ಯೂಕ್ ಮ್ಯಾನ್ ಅಹ್ಮದ್ ಯಡ್ಜಾನಿ ಬಂಧಿತ ಆರೋಪಿಗಳಾಗಿದ್ದಾರೆ.
ಜೂನ್ 1 ರಂದು ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಪೊಲೀಸರ ತಂಡ ಬಾಲಕಿಯನ್ನು ಪತ್ತೆ ಹಚ್ಚಿದೆ. ನಂತರ ಆಕೆಯ ಹೇಳಿಕೆ ಪಡೆಯಲು ಬಾರೊಸಾ ಸೆಂಟರ್ ಗೆ ವರ್ಗಾಯಿಸಲಾಗಿದೆ.
ತನ್ನ ಪೋಷಕರ ಮನೆಗೆ ಬಾಲಕಿ ಒಬ್ಬಳೇ ನಡೆದು ಹೋಗುತ್ತಿದ್ದನ್ನು ನೋಡಿದ ಆರೋಪಿ ಶೇಕ್ ಕಲೀಂ, ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ತನ್ನ ಕಾರಿನಲ್ಲಿ ಕುಳಿರಿಸಿಕೊಂಡಿದ್ದಾನೆ. ನಂತರ 10 ಗಂಟೆ ಸುಮಾರಿನಲ್ಲಿ ಎರಡನೇ ಆರೋಪಿ ಮೊಹಮ್ಮದ್ ಮನೆ ಹತ್ತಿರ ಕರೆದೊಯ್ಯುದಿದ್ದಾನೆ. ನಂತರ ಇಬ್ಬರು ಆರೋಪಿಗಳು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಪೊಲೀಸರು ಹೇಳಿದ್ದಾರೆ.