Hubballi : ಈದ್ಗಾ ಮೈದಾನದಲ್ಲಿ ನಮಗೂ ಅವಕಾಶ ನೀಡಿ – ಕ್ರೈಸ್ತ ಸಂಘಟನೆಗಳ ಪತ್ರ

Chamarajanaga

ವಿವಾದಿತ ಹುಬ್ಬಳ್ಳಿಯ (Hubballi) ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಿದ ಬೆನ್ನಲ್ಲೇ, ನಮಗೂ ಅವಕಾಶ ನೀಡಬೇಕು ಎಂದು ಕ್ರೈಸ್ತ ಸಂಘಟನೆಗಳು ಮಹಾನಗರ ಪಾಲಿಕೆಗೆ ಪತ್ರ ಬರೆದಿವೆ.

ಮಂಗಳವಾರವಷ್ಟೇ ಗಣೇಶೋತ್ಸವ ಆಚರಣೆಗೆ ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆ ಗಣೇಶೋತ್ಸವ ಸಮಿತಿಗೆ ಅವಕಾಶ ನೀಡಿತ್ತು. ಈ ಪಾಲಿಕೆಗೆ ಈ ಆದೇಶಕ್ಕೆ ತಡೆ ನೀಡುವಂತೆ ವಕ್ಫ್ ಬೋರ್ಡ್​​ ಹೈಕೋರ್ಟ್​ ಮೆಟ್ಟಿಲೇರಿತ್ತು. ಆದರೆ, ಹೈಕೋರ್ಟ್​ ಮಧ್ಯಂತರ ಆದೇಶ ನೀಡಲು ನಿರಾಕರಿಸಿತ್ತು. ಇಂದು ಬೆಳ್ಳಂಬೆಳಿಗ್ಗೆಯೇ ಗಣೇಶೋತ್ಸವ ಸಮಿತಿ ಈದ್ಗಾ ಮೈದಾನದಲ್ಲಿ ಗಣೇಶನನ್ನು ಕೂರಿಸಿದೆ.

ಇದನ್ನೂ ಓದಿ : BIG BREAKING: ಹುಬ್ಬಳ್ಳಿ ಈದ್ಗಾ ಮೈದಾನದಲ್ಲೂ ಗಣೇಶೋತ್ಸವಕ್ಕೆ ಅನುಮತಿ

ಇದೀಗ, ಹುಬ್ಬಳ್ಳಿಯ (Hubballi) ಈದ್ಗಾ ಮೈದಾನದಲ್ಲಿ ಕ್ರೈಸ್ತ ಧರ್ಮದ ಪ್ರಾರ್ಥನೆಗೂ ಅವಕಾಶ ನೀಡಬೇಕು ಎಂದು ಕ್ರೈಸ್ತ ಸಂಘಟನೆಗಳು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿವೆ.

LEAVE A REPLY

Please enter your comment!
Please enter your name here