Hoysala : ಡಾಲಿ ಧನಂಜಯ್​ ನಟನೆಯ 25 ನೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

Hoysala

ನಟ ಡಾಲಿ ಧನಂಜಯ್ ನಟನೆಯ 25 ನೇ ಸಿನೆಮಾ ‘ಹೊಯ್ಸಳ’ (Hoysala) ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ಸಾಲು ಸಾಲು ಚಿತ್ರಗಳಲ್ಲಿ ಬ್ಯಸಿಯಾಗಿರುವ ನಟ ಡಾಲಿ ಧನಂಜಯ್ ಅವರ ಹೊಯ್ಸಳ  (Hoysala)  ಚಿತ್ರ 2023 ರ ಮಾರ್ಚ್​ 30 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಡಾಲಿ ಧನಂಜಯ ಅವರು ಈ ಚಿತ್ರದಲ್ಲಿ ಗುರುದೇವ ಹೊಯ್ಸಳ ಎಂಬ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಒಬ್ಬ ಪೊಲಿಸ್ ದಿಟ್ಟ ಅಧಿಕಾರಿಯ ಹೋರಾಟದ ಸುತ್ತ ಮುತ್ತ ಈ ಕಥೆಯನ್ನು ಎಣೆಯಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ : ಡಾಲಿ ಧನಂಜಯ್​ ಹುಟ್ಟುಹಬ್ಬದಂದು ಅಪರೂಪದ ಘೋಷಣೆ – ಹೊಸಬರಿಗೆ ಸಿಹಿ ಸುದ್ದಿ

ಈ ಚಿತ್ರವನ್ನು ವಿಜಯ್ ಎನ್ ನಿರ್ದೇಶನ ಮಾಡುತ್ತಿದ್ದು, ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಅಜನೀಶ್ ಲೋಕೇಶ್ ಅವರ ಸಂಗೀತ ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್, ಅಚ್ಯುತ್ ಕುಮಾರ್, ಕೆಜಿಎಫ್ ಬಾಬು, ಪ್ರತಾಪ್ ನಾರಾಯಣ್ ಸೇರಿದಂತೆ ಇತರರು ಸಹ ಕಲಾವಿದರಾಘಿ ಬಣ್ಣ ಹಚ್ಚಿದ್ದಾರೆ.

ಇನ್ನು, ನಟ ಡಾಲಿ ಧನಂಜಯ ಅವರು ನಟನೆಯ ಚಿತ್ರಗಳು ಸಾಲು ಸಾಲಾಗಿ ಬಿಡುಗಡೆಯಾಗಲಿವೆ. ಇದೇ ತಿಂಗಳು ಮಾನ್ಸೂನ್ ರಾಗ, ತೋತಾಪುರಿ ಸಿನೆಮಾಗಳು ಬಿಡುಗಡೆಯಾಗಲಿವೆ. ಅಲ್ಲದೇ, ಒನ್ಸ್​ ಅಪನ್​ ಎ ಟೈಮ್​ ಇನ್ ಜಮಾಲಿಗುಡ್ಡ, ಡಾಲಿ, ಆರ್ಕೆಸ್ಟ್ರಾ ಮೈಸೂರು, ಮನು ಚರಿತ, ಹೆಡ್​ಬುಷ್, ಉತ್ತರಕಾಂಡ ಚಿತ್ರಗಳಲ್ಲಿ ಡಾಲಿ ಧನಂಜಯ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ : ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಡಾಲಿ..? – ನಟ ಧನಂಜಯ್ ಹೇಳಿದ್ದೇನು..?

LEAVE A REPLY

Please enter your comment!
Please enter your name here