2016ರಲ್ಲಿ 500 ರೂಪಾಯಿ ಮತ್ತು 1 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದಾಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೇಳಿದ ಮಾತು – ದೇಶದ ಆರ್ಥಿಕತೆಯಲ್ಲಿ ನೋಟುಗಳ ಚಲಾವಣೆ ಕಡಿಮೆ ಮಾಡುವ ಉದ್ದೇಶ ಎಂದು. ಆದರೆ ಆರ್ಬಿಐ ಅಂಕಿಅAಶದ ಪ್ರಕಾರ ನೋಟುಗಳ ಮುದ್ರಣಕ್ಕೆ ಆರ್ಬಿಐ ಮಾಡುತ್ತಿರುವ ಖರ್ಚು ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ.
2008-09ರ ಅವಧಿಯಲ್ಲಿ ನೋಟು ಮುದ್ರಣದ ವೆಚ್ಚ 2,063 ಕೋಟಿ ರೂಪಾಯಿ ಆಗಿತ್ತು. ಈ ಲೆಕ್ಕಾಚಾರಕ್ಕೆ ಹೋಲಿಸಿದ್ರೆ 2021-22ರ ಅವಧಿಯಲ್ಲಿ ಈ ವೆಚ್ಚ 2,921 ಕೋಟಿ ರೂಪಾಯಿಯಷ್ಟು ಅಧಿಕ.
2015-16ರ ಆರ್ಥಿಕ ವರ್ಷದಲ್ಲಿ ಅಂದರೆ ನೋಟು ನಿಷೇಧಕ್ಕೂ ಒಂದು ವರ್ಷ ಮೊದಲು ನೋಟು ಮುದ್ರಣಕ್ಕೆ ಆರ್ಬಿಐ ಭರಿಸಿದ ವೆಚ್ಚ -3,421 ಕೋಟಿ ರೂಪಾಯಿ. ಮುದ್ರಣವಾದ ನೋಟುಗಳ ಸಂಖ್ಯೆ 21,295 ದಶಲಕ್ಷ ನೋಟುಗಳು – ಚಲಾವಣೆಗೆ ಬಂದ ನೋಟುಗಳ ಒಟ್ಟು ಮೌಲ್ಯ – 17,07,716 ಕೋಟಿ ರೂಪಾಯಿ.
ನೋಟು ನಿಷೇಧದ ವರ್ಷ ಅಂದರೆ 2016-17ರ ಅವಧಿಯಲ್ಲಿ ನೋಟು ಮುದ್ರಣದ ವೆಚ್ಚ ಎರಡು ಪಟ್ಟು ಅಧಿಕ ಅಂದರೆ 7,965 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು. ಆ ಹಣಕಾಸು ವರ್ಷದಲ್ಲಿ 15,06,331 ಕೋಟಿ ರೂಪಾಯಿ ಮೊತ್ತದ 29,043 ದಶ ಲಕ್ಷ ನೋಟುಗಳು ಚಲಾವಣೆಗೆ ಬಂದಿವೆ, ನೋಟುಗಳ ಒಟ್ಟು ಮೌಲ್ಯದಲ್ಲಿ ಇಳಿಕೆಯಾದರೂ ನೋಟುಗಳ ಸಂಖ್ಯೆಯಲ್ಲಿ ಏರಿಕೆ ಆಗಿತ್ತು.
2017-18: ನೋಟು ಮುದ್ರಣಕ್ಕೆ ವೆಚ್ಚ – 4,912 ಕೋಟಿ ರೂ. ಮುದ್ರಣ ಆದ ನೋಟುಗಳ ಒಟ್ಟು ಮೌಲ್ಯ -19,11,960 ಕೋಟಿ ರೂಪಾಯಿ – ನೋಟುಗಳ ಸಂಖ್ಯೆ – 25,003 ದಶಲಕ್ಷ -(2016ಕ್ಕೆ ಹೋಲಿಸಿದರೆ ಇಳಿಕೆ ಆದರೂ 2015ಕ್ಕೆ ಹೋಲಿಸಿದ್ರೆ ಅಂದರೆ ನೋಟು ನಿಷೇಧದ ಹಿಂದಿನ ವರ್ಷಕ್ಕೆ ಹೋಲಿಸಿದ್ರೆ ಎಲ್ಲವೂ ಹೆಚ್ಚಳ ಆಗಿದೆ.)
2018-19: ನೋಟು ಮುದ್ರಣಕ್ಕೆ ವೆಚ್ಚ – 4,811 ಕೋಟಿ ರೂ., ಮುದ್ರಣ ಆದ ನೋಟುಗಳ ಒಟ್ಟು ಮೌಲ್ಯ -21,68,797 ಕೋಟಿ ರೂಪಾಯಿ, ನೋಟುಗಳ ಸಂಖ್ಯೆ – 29,191 ದಶಲಕ್ಷ
2019-20: ನೋಟು ಮುದ್ರಣಕ್ಕೆ ವೆಚ್ಚ – 4,378 ಕೋಟಿ ರೂ., ಮುದ್ರಣ ಆದ ನೋಟುಗಳ ಒಟ್ಟು ಮೌಲ್ಯ -26,35,575 ಕೋಟಿ ರೂಪಾಯಿ, ನೋಟುಗಳ ಸಂಖ್ಯೆ – 22,387 ದಶಲಕ್ಷ
2020-21: ನೋಟು ಮುದ್ರಣಕ್ಕೆ ವೆಚ್ಚ – 4,012 ಕೋಟಿ ರೂ., ಮುದ್ರಣ ಆದ ನೋಟುಗಳ ಒಟ್ಟು ಮೌಲ್ಯ -28,26,863 ಕೋಟಿ ರೂಪಾಯಿ, ನೋಟುಗಳ ಸಂಖ್ಯೆ – 22,330 ದಶಲಕ್ಷ
2021-22: ನೋಟು ಮುದ್ರಣಕ್ಕೆ ವೆಚ್ಚ – 4,985 ಕೋಟಿ ರೂ., ಮುದ್ರಣ ಆದ ನೋಟುಗಳ ಒಟ್ಟು ಮೌಲ್ಯ -31,05,721 ಕೋಟಿ ರೂಪಾಯಿ, ನೋಟುಗಳ ಸಂಖ್ಯೆ – 22,250 ದಶಲಕ್ಷ
ನೋಟು ಮುದ್ರಣಕ್ಕೆ ಬಳಸುವ ಕಲರ್ ಶಿಫ್ಟ್ ಇಂಟ್ಯಾಗಿಲೋ ಶಾಹಿ, ಬ್ಯಾಂಕ್ ನೋಟುಗಳಲ್ಲಿ ಬಳಸುವ ಸೆಕ್ಯೂರಿಟಿ ಫೀರ್ಸ್ನ್ನು ಆರ್ಬಿಐ ಈಗ ಆಮದು ಮಾಡಿಕೊಳ್ಳುತ್ತಿಲ್ಲ. ಮೈಸೂರಿನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೆöÊವೇಟ್ ಲಿಮಿಟೆಡ್ನಲ್ಲಿ ತಯಾರಾಗುವ ವರ್ಣಿಕಾ ಶಾಹಿಯನ್ನೇ ಬಳಸುತ್ತಿದೆ.