ಹೊಂಬಾಳೆ ಬ್ಯಾನರ್ನಲ್ಲಿ ನೂತನ ಚಿತ್ರಕ್ಕೆ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ನಿರ್ದೇಶನದ ಜೊತೆಗೆ ನಟನೆ ಮಾಡಲಿದ್ದಾರೆ.
ಮಲಯಾಳಂನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಜನ ಗಣ ಮನ’ ಚಿತ್ರದ ಮೂಲಕ ಯಶಸ್ಸು ಗಳಿಸಿದ್ದ ನಟ ಪೃಥ್ವಿರಾಜ್ ಕನ್ನಡದ ಹೊಂಬಾಳೆ ಬ್ಯಾನರ್ನಲ್ಲಿ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಇವರ ಜನ ಗಣ ಮನ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಚಿತ್ರಮಂದಿರಗಳಲ್ಲಿ ಈ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಪೃಥ್ವರಾಜ್ ಅವರೊಂದಿಗೆ ಕೈಜೋಡಿಸಿದ ಬಗ್ಗೆ ಟ್ವೀಟ್ ಮಾಡಿ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್, ನಮ್ಮ ಮುಂದಿನ ಚಿತ್ರ ಟೈಸನ್ಗಾಗಿ ನಟ ಪೃಥ್ವಿರಾಜ್ ಅವರೊಂದಿಗೆ ಕೈಜೋಡಿಸುತ್ತಿರುವುದು ಸಂತೋಷವಾಗುತ್ತಿದೆ.
ಸಮಾಜದಲ್ಲಿನ ಜಿಡ್ಡುಗಟ್ಟಿದ ವ್ಯವಸ್ಥೆಯ ಸರಪಳಿಯನ್ನು ಕಿತ್ತೆಸೆಯಲು ರಕ್ಷಕ ಬರುತ್ತಿದ್ದಾನೆ. ಕೆಚ್ಚೆದೆಯ ರಕ್ಷಕನಿಂದ ಬೆರಗಾಗಲು ಸಿದ್ದರಾಗಿ ಎಂದು ಹೇಳಿದೆ. ಆ ಮೂಲಕ ಈ ಚಿತ್ರದ ಕಥೆ ಸಮಾಜದ ವ್ಯವಸ್ಥೆಯಲ್ಲಿನ ಲೋಪದೋಷಗಳ ವಿರುದ್ಧ ಹೋರಾಡುವ ಒಬ್ಬ ನಾಯಕ ಕಥೆಯನ್ನು ಟೈಸನ್ ಚಿತ್ರ ಹೊಂದಿದೆ.
https://twitter.com/hombalefilms/status/1535229036917510144?s=20&t=XHcdpb99jI-oTCeErdmx1w
ಇನ್ನು, ಈ ಬಗ್ಗೆ ಟ್ವಿಟ್ ಮಾಡಿರುವ ನಟ ಪೃಥ್ವಿರಾಜ್, ನನ್ನ ನಾಲ್ಕನೇ ನಿರ್ದೇಶನದ ಚಿತ್ರ ನಿಮ್ಮ ಮುಂದೆ ಇಡಲು ಸಿದ್ದನಾಗಿದ್ದೇನೆ. ವಿಜಯ್ ಕಿರಗಂದೂರು ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಟೈಸನ್ ಚಿತ್ರವನ್ನು ನಟ ಪೃಥ್ವಿರಾಜ್ ನಿರ್ದೇಶಿಸಿ, ನಟಿಸಲಿದ್ದಾರೆ. ಈ ಚಿತ್ರಕ್ಕೆ ಮುರುಳಿ ಗೋಪಿಯವರ ಕಥೆ ಇದೆ. ಹೊಂಬಾಳೆ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ. ಪೂರ್ಣ ಚಿತ್ರತಂಡ ನಿರ್ಧಾರವಾಗಿಲ್ಲ.
ಹೊಂಬಾಳೆ ಬ್ಯಾನರ್ನ ಭಾರತದ ಅತಿ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯಾಗುವತ್ತ ದಾಪುಗಾಲು ಹಾಕುತ್ತಿದೆ. ಕೆಜಿಎಫ್-1 ಮತ್ತು ಕೆಜಿಎಫ್-2 ಚಿತ್ರದ ಮೂಲಕ ಹೊಂಬಾಳೆ ಬ್ಯಾನರ್ ದೊಡ್ಡ ಮಟ್ಟದ ಪ್ರಸಿದ್ದಿ ಪಡೆದಿದೆ. ನಟ ಪ್ರಭಾಸ್ ಅವರೊಂದಿಗೆ ಸಲಾರ್, ಶ್ರೀಮುರುಳಿಯವರ ಬಗೀರ, ರಿಷಬ್ ಶೆಟ್ಟಿಯವರ ಕಾಂತಾರ, ರಾಘವೇಂದ್ರ ಸ್ಟೋರ್ಸ್ ಹಾಗೂ ಯುವ ರಾಜ್ಕುಮಾರ್ ಅವರ ನೂತನ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಹೊಂಬಾಳೆ ಬ್ಯಾನರ್ ಹೊತ್ತಿದೆ.
https://twitter.com/PrithviOfficial/status/1535229627702075393?s=20&t=XHcdpb99jI-oTCeErdmx1w