ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಕಾರಣದಿಂದ 25 ವರ್ಷದ ಹಿಂದೂ ಯುವಕನ ಹತ್ಯೆ ಮಾಡಲಾಗಿದೆ.
ಸೋಮವಾರ ರಾತ್ರಿ ಕಲಬುರ್ಗಿ ಜಿಲ್ಲೆಯ ವಾಡಿ ನಗರದ ಭೀಮನಗರ್ ಲೇಔಟ್ನ ರೈಲ್ವೇಸ್ಟೇಷನ್ ಹತ್ತಿರದಲ್ಲಿ ಯುವಕ ಅಜಿತ್ ಕಾಂಬ್ಳೆಯವರನ್ನು ಹತ್ಯೆ ಮಾಡಲಾಗಿದೆ. ಈ ಸಂಬಂಧ ಎಚ್ಚೆತ್ತಿರುವ ಪೊಲೀಸ್ ಇಲಾಖೆ ನಗರಕ್ಕೆ ಹೆಚ್ಚಿನ ಪೊಲೀಸ್ ಪೋರ್ಸ್ ಕಳುಹಿಸಿದೆ.
ಹತ್ಯೆಗೂ ಮುಂಚೆ ವಿಜಯ್ ಕಾಂಬ್ಳೆಯವರೊಂದಿಗೆ ಅಪರಾಧಿಗಳು ಗಲಾಟೆ ನಡೆಸಿದ್ದರು. ಅನಂತರ ಅರಿತವಾದ ಆಯುಧಗಳಿಂದ ಇರಿದು ಹತ್ಯೆ ನಡೆಸಿದ್ದಾರೆ.
“ನಾವು ಮಾತನಾಡುತ್ತಾ ಕುಳಿತಿದ್ದೆವು. ಆಗ ನಮ್ಮ ಮುಂದೆ ಬಂದ ಇಬ್ಬರು ವ್ಯಕ್ತಿಗಳ ಹರಿತವಾದ ಆಯುಧಗಳಿಂದ ವಿಜಯ್ಗೆ ಇರಿದು ಓಡಿ ಹೋಗಿದ್ದಾರೆ” ಎಂದು ವಿಜಯ್ ಸ್ನೇಹಿತ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ವಿಜಯ್ ಮುಸ್ಲಿಂ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದ. ಆದರೆ ಯುವತಿಯ ಮನೆಯವರು ಈ ಮದುವೆಯನ್ನು ತಿರಸ್ಕರಿಸಿದ್ದರು.
ಬಾಲಕಿಯ ತಂದೆ ಮತ್ತು ಸಹೋದರ ತನ್ನ ಮಗನಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ವಿಜಯ್ ತಾಯಿ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದ ಮುಸ್ಲಿಂ ಯುವತಿಯ ಸಹೋದರ ಇತರೆ ಇಬ್ಬರೊಂದಿಗೆ ಮನೆಗೆ ಬಂದಿದ್ದರು. ಈ ವೇಳೆ ನನ್ನ ಮಗನಿಗೆ, ತಮ್ಮ ತಂಗಿಯೊಂದಿಗಿನ ಪ್ರೀತಿಯನ್ನು ಇಲ್ಲಿಗೆ ಕೊನೆಗೊಳಿಸು. ಇಲ್ಲದೇ ಹೋದರೆ ಪರಿಸ್ಥಿತಿ ಬೇರೆಯೇ ಆಗುತ್ತದೆ ಎಂದು ಹೇಳಿದ್ದರು. ನಾವು ಆ ವೇಳೆ ನನ್ನ ಮಗನಿಗೆ ನಾವು ಬುದ್ದಿ ಹೇಳುತ್ತೇವೆ. ಆದರೆ, ಮಗನಿಗೆ ಯಾವುದೇ ಅಪಾಯ ಮಾಡದಂತೆ ವಿನಂತಿಸಿಕೊಂಡಿದ್ದೆವು ಎಂದು ಎಂದು ವಿಜಯ್ ತಾಯಿ ಹೇಳಿದ್ದಾರೆ.
ವಿಜಯ್ ಕಾಂಬ್ಳೆ ಕೊಲೆಗೆ ಸಂಬಂಧಿಸಿದಂತೆ ಮುಸ್ಲಿಂ ಯುವತಿಯ ಸಹೋದರ 19 ವರ್ಷದ ಶಹಾಬುದ್ದೀನ್ ಹಾಗೂ ಇನ್ನೊಬ್ಬ 19 ವರ್ಷದ ನವಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.