ಪ್ರಧಾನಿ ನರೇಂದ್ರ ಮೋದಿಯವರ 2 ದಿನಗಳ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಬಿಜೆಪಿ ಸಚಿವರು ಕನ್ನಡ ಮರೆತು ಹಿಂದಿ ಗುಲಾಮಗಿರಿ ಪ್ರದರ್ಶಿಸಿದ್ದಾರೆ. ಬಿಜೆಪಿ ನಾಯಕರ ಈ ಹಿಂದಿ ಗುಲಾಮಿ ಮನಸ್ಥಿತಿಯನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಅವರ ಬಣ ಈ ಹಿಂದಿ ಬ್ಯಾನರ್/ಪ್ಲೆಕ್ಸ್ಗಳಿಗೆ ಮಸಿ ಬಳೆದು ಪ್ರತಿಭಟನೆ ನಡೆಸಿದೆ.
ಜೂನ್ 21 ರ ಯೋಗದಿನದಂದು ಪ್ರಧಾನಿಯವರು ಮೈಸೂರಿಗೆ ಬರಲಿದ್ದಾರೆ. ಪ್ರಧಾನಿ ಮೋದಿಯವರು ಚಲಿಸುವ ದಾರಿಯುದ್ದಕ್ಕೂ ಬಿಜೆಪಿಯ ಸಚಿವ, ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ, ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಬಿಜೆಪಿ ನಾಯಕರು ಹಿಂದಿ ಭಾಷೆಯಲ್ಲಿ ಬ್ಯಾನರ್ ಅಳವಡಿಸಿದ್ದಾರೆ.
ಸಚಿವರ ಈ ಹಿಂದಿ ಮನಸ್ಥಿತಿಯ ಧೋರಣೆಯನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ಅವರ ತಂಡ ಈ ಹಿಂದಿ ಬ್ಯಾನರ್ಗಳಿಗೆ ಪೊಲೀಸರ ಅಡ್ಡಿಯ ನಡುವೆಯೂ ಮಸಿ ಬಳೆದಿದೆ.
ಪ್ಲೆಕ್ಸ್ಗಳಿಗೆ ಮಸಿ ಬಳೆದ ಟಿ.ಎ.ರಧರ್ಮರಾಜ್ ಸೇರಿದಂತೆ ಇತರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.