Hindi Imposition : ಹಿಂದಿ ದಿವಸ ಆಚರಣೆ ವಿರೋಧಿಸಿ ಜೆಡಿಎಸ್​ನಿಂದ ಪ್ರತಿಭಟನೆ

Hindi Imposition

ಬಲವಂತದ ಹಿಂದಿ ಹೇರಿಕೆ (Hindi Imposition) ಹಾಗೂ ಒಕ್ಕೂಟ ಸರ್ಕಾರದ ಪ್ರಯೋಜಕತ್ವದಲ್ಲಿ ನಡೆಯುವ ಹಿಂದಿ ದಿವಸ ಆಚರಣೆಯನ್ನು ವಿರೋದಿಸಿ ಮಾಜಿ ಮುಖ್ಯ ಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಅವರ ನೇತೃತ್ವದಲ್ಲಿ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದೆ.

ಕೇಂದ್ರ ಸರ್ಕಾರದ ಹಿಂದಿ ರಾಷ್ಟ್ರೀಯ ದಿವಸ ಕಾರ್ಯಕ್ರಮ ಆಚರಣೆಗೆ ದಕ್ಷಿಣ ರಾಜ್ಯಗಳಿಂದ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ, ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದು ಹಿಂದಿ ದಿವಸವನ್ನು ರಾಜ್ಯ ಸರ್ಕಾರದಿಂದ ಆಚರಣೆ ಮಾಡಬಾರದು. ಈ ಆಚರಣೆಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ ಹಣ ಖರ್ಚು ಮಾಡಬಾರದು ಎಂದು ಪತ್ರ ಬರೆದಿದ್ದರು.

ತಮಿಳುನಾಡಿನ ಶಿಕ್ಷಣ ಸಚಿವರು ಹಿಂದಿ ದಿವಸ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕನ್ನಡದ ಹೋರಾಟಗಾರರು, ಸಾಮಾನ್ಯ ಜನರೂ ಹಿಂದಿ ದಿವಸ ಆಚರಣೆಗೆ ತೀವ್ರ ಪ್ರತಿರೋಧ ತೋರುತ್ತಿದ್ದಾರೆ. ಇದನ್ನೂ ಓದಿ : ಹಿಂದಿ ಹೇರಿಕೆ ವಿರುದ್ಧ ಗುಡುಗಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ

ಈ ಹಿಂದೆ ಘೊಷಿಸಿದಂತೆ ಜೆಡಿಎಸ್​​ ನಾಯಕ ಹಿಂದಿ ದಿವಸ ಆಚರಣೆಯ ವಿರುದ್ಧ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಜೆಡಿಎಸ್ ಕಾರ್ಯಕರ್ತರಯ ರಾಜ್ಯದ ವಿವಿಧ ಭಾಗಗಳಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಜನರೂ ಹಿಂದಿ ಹೇರಿಕೆ (Hindi Imposition) ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂದಿ ಹೇರಿಕೆ ನಿಲ್ಲಿಸಿ, #HindiImposition ಎಂಬ ಟ್ಯಾಗ್​ಲೈನ್ ಬಳಸಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ಟ್ಯಾಗ್​ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತ ಟ್ರೆಂಡಿಂಗ್​ನಲ್ಲಿರುವುದೇ ಹಿಂದಿ ಹೇರಿಕೆಯ ವಿರುದ್ಧ ಜನಸಾಮಾನ್ಯರ ಆಕ್ರೋಶ ತೋರ್ಪಡಿಸುತ್ತದೆ. ‘ಹಿಂದಿ ಭಾಷೆ ಶೂದ್ರರಿಗೆ ಮಾತ್ರ ಮೀಸಲು’ : ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ಸಂಸದ

LEAVE A REPLY

Please enter your comment!
Please enter your name here