Hijab Case : ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

Hijab Row case

ಹಿಜಾಬ್​ ವಿವಾದದ (Hijab Row Case) ಕುರಿತು ರಾಜ್ಯ ಹೈಕೋರ್ಟ್​ ನೀಡಿರುವ ಆದೇಶಕ್ಕೆ ತಡೆ ನೀಡುವಂತೆ ಕೋರಿರುವ ಅರ್ಜಿಗಳ ವಿಚಾರಣೆಯನ್ನು ಇಂದು ಸುಪ್ರೀಂಕೋರ್ಟ್​ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಸುಪ್ರೀಂಕೋರ್ಟ್​​ ವಿಚಾರಣೆ ಮುಂದೂಡಿದೆ.

ಇಂದು ಹಿಜಾಬ್​ ವಿವಾದದ ಪ್ರಕರಣವನ್ನು (Hijab Row Case) ಸುಪ್ರೀಂಕೋರ್ಟ್​​ ಕೈಗೆತ್ತಿಕೊಂಡಿದೆ. ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡುವಂತೆ ಕೋರಿದ ಮಧ್ಯಂತರ ಆದೇಶಕ್ಕೆ ಸುಪ್ರೀಂಕೋರ್ಟ್​ ನಕಾರ ವ್ಯಕ್ತಪಡಿಸಿದೆ.

ಮುಂದಿನ ಸೋಮವಾರ ಸೆ.5ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿ ಸುಪ್ರೀಂಕೋರ್ಟ್​ ಆದೇಶಿಸಿದೆ.

ಇದನ್ನೂ ಓದಿ : ಹಿಜಾಬ್ ತೀರ್ಪಿನ ವಿರುದ್ಧ ಮೇಲ್ಮನವಿ : ಅರ್ಜಿ ಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿ

ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು. ಹಾಗೆಯೇ ರಾಜ್ಯ ಹೈಕೋರ್ಟ್​​ ತೀರ್ಪಿಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್​​ಮನಲ್ಲಿ ಬರೋಬ್ಬರಿ 24 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿವೆ.

ರಾಜ್ಯದಲ್ಲಿ ಹಿಜಾಬ್​ ವಿವಾದದ ತೀರ್ಪು ಬಂದ ಬೆನ್ನಲ್ಲೇ, ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಈ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಶೀಘ್ರ ವಿಚಾರಣೆಯನ್ನು ಸುಪ್ರೀಂಕೋರ್ಟ್​​ ತಿರಸ್ಕರಿಸಿತ್ತು. ಇದೀಗ ಈ ಅರ್ಜಿಗಳ ವಿಚಾರಣೆ ಆರಂಭವಾಗಿದೆ.

ಇದನ್ನೂ ಓದಿ : ಉಡುಪಿ : ಹಿಜಾಬ್ ವಿವಾದ – ಪರೀಕ್ಷೆ ಬಹಿಷ್ಕರಿಸಿದ 40 ವಿದ್ಯಾರ್ಥಿನಿಯರು

LEAVE A REPLY

Please enter your comment!
Please enter your name here