Hijab Controversy : ಸುಪ್ರೀಂಕೋರ್ಟ್​​ನಲ್ಲಿ ಹಿಜಾಬ್ ವಿಚಾರಣೆ ಅಂತ್ಯ; ತೀರ್ಪು ಕಾಯ್ದಿರಿಸಿದ ಕೋರ್ಟ್

Hijab Controversy

ಕರ್ನಾಟಕ ಹೈಕೋರ್ಟ್​ ನೀಡಿದ್ದ ಹಿಜಾಬ್ ತೀರ್ಪಿನ (Hijab Controversy) ವಿರುದ್ಧ ಸುಪ್ರೀಂ ಕೋರ್ಟ್​ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್​​ ಇಂದು ಅಂತ್ಯಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.

ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಹಿಜಾಬ್​ ಗೆ ಅನುಮತಿ ಇಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ತರಗತಿಯ ಒಳಗಡೆ ಮಾತ್ರ ಹಿಜಾಬ್ ಧರಿಸುವಂತಿಲ್ಲ. ಶಾಲಾ ಆವರಣದಲ್ಲಿ ಹಾಗೂ ಬಸ್ಸಿನ ಒಳಗಡೆ ಹಿಜಾಬ್ ಧರಿಸಬಹುದು ಎಂದು ತೀರ್ಪು ನೀಡಿತ್ತು.

ಈ ತೀರ್ಪಿನ (Hijab Controversy) ವಿರುದ್ಧ ಮತ್ತೆ ಆ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಇತರರು ಸುಪ್ರೀಂಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ಒಂದು ವಾರದಿಂದ ಸುಪ್ರೀಂಕೋರ್ಟ್​ ಎರಡು ಕಡೆಯ ವಾದಗಳನ್ನು ಆಲಿಸಿದ್ದು, ಇಂದು ವಿಚಾರಣೆ ಅಂತ್ಯಗೊಳಿಸಿದೆ. ತೀರ್ಪನ್ನು ಕಾಯ್ದಿರಿಸಿದೆ.

ಇದನ್ನೂ ಓದಿ : ಹಿಜಾಬ್ ತೀರ್ಪಿನ ವಿರುದ್ಧ ಮೇಲ್ಮನವಿ : ಅರ್ಜಿ ಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿ

LEAVE A REPLY

Please enter your comment!
Please enter your name here