23 ಹೈಕೋರ್ಟ್​ ನ್ಯಾಯಮೂರ್ತಿಗಳ ವರ್ಗಾವಣೆಗೆ ಶಿಫಾರಸ್ಸು – ಗುಜರಾತ್​ ಹೈಕೋರ್ಟ್​ನ 4 ನ್ಯಾಯಮೂರ್ತಿಗಳೂ ವರ್ಗಾ

ಮಹತ್ವದ ಶಿಫಾರಸ್ಸಿನಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​, ನ್ಯಾಯಮೂರ್ತಿ ಸಂಜಯ್​ ಕಿಶನ್​ ಕೌಲ್​, ನ್ಯಾಯಮೂರ್ತಿ ಸಂಜಯ್​ ಖನ್ನಾ, ನ್ಯಾಯಮೂರ್ತಿ ಬಿ ಆರ್​ ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್​ ಅವರಿರುವ ಕೊಲಿಜಿಯಂ 23 ಹೈಕೋರ್ಟ್​ಗಳ ನ್ಯಾಯಮೂರ್ತಿಗಳ ವರ್ಗಾವಣೆಗೆ ಶಿಫಾರಸ್ಸು ಮಾಡಿದೆ.

ಕರ್ನಾಟಕ ಹೈಕೋರ್ಟ್​ ನ್ಯಾಯಮೂರ್ತಿ ನರೇಂದರ್​ ಜಿ ಅವರನ್ನು ಒಡಿಶಾ ಹೈಕೋರ್ಟ್​ಗೆ ವರ್ಗಾವಣೆಗೆ ಶಿಫಾರಸ್ಸು ಮಾಡಲಾಗಿದೆ.

ರಾಹುಲ್​ ಗಾಂಧಿ ಅವರ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್​ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ಗುಜರಾತ್​ ಹೈಕೋರ್ಟ್​ ನ್ಯಾಯಮೂರ್ತಿ ಎಂ ಪ್ರಚ್ಹಾಕ್​​ ಅವರನ್ನು ಪಾಟ್ನಾ ಹೈಕೋರ್ಟ್​ಗೆ ವರ್ಗಾವಣೆಗೆ ಶಿಫಾರಸ್ಸು ಮಾಡಲಾಗಿದೆ

ಮನುಸ್ಪೃತಿ ಪರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಗುಜರಾತ್​ ಹೈಕೋರ್ಟ್​ನ ಸಮೀರ್​ ಜೆ ದವೆ ಅವರನ್ನು ರಾಜಸ್ಥಾನ ಹೈಕೋರ್ಟ್​ಗೆ ವರ್ಗಾವಣೆಗೆ ಶಿಫಾರಸ್ಸು ಮಾಡಲಾಗಿದೆ.

ಗುಜರಾತ್​ ಹೈಕೋರ್ಟ್​:

ನ್ಯಾಯಮೂರ್ತಿ ಅಲ್ಪೇಶ್​ ವೈ ಕೋಗ್ಜೆ – ಅಲಹಾಬಾದ್​ ಹೈಕೋರ್ಟ್​ಗೆ ವರ್ಗಾವಣೆ

 ನ್ಯಾಯಮೂರ್ತಿ ಕುಮಾರಿ ಗೀತಾ ಗೋಪಿ – ಮದ್ರಾಸ್​ ಹೈಕೋರ್ಟ್​ಗೆ ವರ್ಗಾವಣೆ

ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​:

ನ್ಯಾಯಮೂರ್ತಿ ಅರವಿಂದ್​ ಸಿಂಗ್​ ಸಂಗ್ವಾನ್​ – ಅಲಹಾಬಾದ್​ ಹೈಕೋರ್ಟ್​ಗೆ ವರ್ಗಾವಣೆ

ನ್ಯಾಯಮೂರ್ತಿ ಅವನೀಶ್​ ಜಿನ್​ಗಾನ್​ – ಗುಜರಾತ್​ ಹೈಕೋರ್ಟ್​ಗೆ ವರ್ಗಾವಣೆ 

ನ್ಯಾಯಮೂರ್ತಿ ರಾಜ್​ ಮೋಹನ್​ ಸಿಂಗ್​ – ಮಧ್ಯಪ್ರದೇಶ ಹೈಕೋರ್ಟ್​ಗೆ ವರ್ಗಾವಣೆ

ನ್ಯಾಯಮೂರ್ತಿ ಅರುಣ್​ ಮೊಂಗಾ – ರಾಜಸ್ಥಾನ ಹೈಕೋರ್ಟ್​ಗೆ ವರ್ಗಾವಣೆ

ಅಲಹಾಬಾದ್​ ಹೈಕೋರ್ಟ್​:

ನ್ಯಾಯಮೂರ್ತಿ ವಿವೇಕ್​ ಕುಮಾರ್​ ಸಿಂಗ್​ – ಮದ್ರಾಸ್​ ಹೈಕೋರ್ಟ್​ಗೆ

ಕೊಲಿಜಿಯಂ ಈ ಕೆಳಗಿನ ನ್ಯಾಯಮೂರ್ತಿಗಳ ವರ್ಗಾವಣೆಗೆ ಮತ್ತೆ ಶಿಫಾರಸ್ಸು ಮಾಡಿದೆ.

ಅಲಹಾಬಾದ್​ ಹೈಕೋರ್ಟ್​:

ನ್ಯಾಯಮೂರ್ತಿ ಪ್ರಕಾಶ್​ ಪಾಡಿಯಾ – ಜಾರ್ಖಂಡ್​ ಹೈಕೋರ್ಟ್​ಗೆ ವರ್ಗಾವಣೆ

ನ್ಯಾಯಮೂರ್ತಿ ಎಸ್​ ಪಿ ಕೇಸರವಾಣಿ – ಕಲ್ಕತ್ತಾ ಹೈಕೋರ್ಟ್​ಗೆ ವರ್ಗಾವಣೆ

ನ್ಯಾಯಮೂರ್ತಿ ರಾಜೇಂದ್ರ ಕುಮಾರ್​ – ಮಧ್ಯಪ್ರದೇಶ ಹೈಕೋರ್ಟ್​ಗೆ ವರ್ಗಾವಣೆ

ಆಂಧ್ರಪ್ರದೇಶ ಹೈಕೋರ್ಟ್​:

ನ್ಯಾಯಮೂರ್ತಿ ಸಿ ಮನವೇಂದ್ರನಾಥ್​ ರಾಯ್​ – ಗುಜರಾತ್​ ಹೈಕೋರ್ಟ್​ಗೆ ವರ್ಗಾವಣೆ

ನ್ಯಾಯಮೂರ್ತಿ ದುಪ್ಪಲ ವೆಂಕಟ – ಮಧ್ಯಪ್ರದೇಶ ಹೈಕೋರ್ಟ್​ಗೆ ವರ್ಗಾವಣೆ

ಕಲ್ಕತ್ತಾ ಹೈಕೋರ್ಟ್​:

ನ್ಯಾಯಮೂರ್ತಿ ಶೇಖರ್​ ಬಿ ಸರಫ್​ – ಅಲಹಾಬಾದ್​ ಹೈಕೋರ್ಟ್​ಗೆ ವರ್ಗಾವಣೆ

ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ – ಪಂಜಾಬ್​ ಹೈಕೋರ್ಟ್​ಗೆ ವರ್ಗಾವಣೆ

ನ್ಯಾಯಮೂರ್ತಿ ಬಿಬೆಕ್​ ಚೌಧುರಿ – ಪಾಟ್ನಾ ಹೈಕೋರ್ಟ್​ಗೆ ವರ್ಗಾವಣೆ

ತೆಲಂಗಾಣ ಹೈಕೋರ್ಟ್​:

ನ್ಯಾಯಮೂರ್ತಿ ಜಿ ಅನುಪಮಾ ಚಕ್ರವರ್ತಿ – ಪಾಟ್ನಾ ಹೈಕೋರ್ಟ್​ಗೆ ವರ್ಗಾವಣೆ

ನ್ಯಾಯಮೂರ್ತಿ ಮುನ್ನುರಿ ಲಕ್ಷ್ಮಣ್​ – ರಾಜಸ್ಥಾನ ಹೈಕೋರ್ಟ್​ಗೆ ವರ್ಗಾವಣೆ

ನ್ಯಾಯಮೂರ್ತಿ ಎಂ ಸುಧೀರ್​ ಕುಮಾರ್​ – ಕಲ್ಕತ್ತಾ ಹೈಕೋರ್ಟ್​ಗೆ ವರ್ಗಾವಣೆ

ನ್ಯಾಯಮೂರ್ತಿ ಸಿ ಸುಮಲತಾ – ಗುಜರಾತ್​ ಹೈಕೋರ್ಟ್​ಗೆ ವರ್ಗಾವಣೆ

ಪಾಟ್ನಾ ಹೈಕೋರ್ಟ್​:

ನ್ಯಾಯಮೂರ್ತಿ ಮುದ್ರೇಶ್​ ಪ್ರಸಾದ್​ – ಕಲ್ಕತ್ತಾ ಹೈಕೋರ್ಟ್​ಗೆ ವರ್ಗಾವಣೆ

ಕರ್ನಾಟಕ ಹೈಕೋರ್ಟ್​:

ನ್ಯಾಯಮೂರ್ತಿ ನರೆಂದರ್​ ಜಿ – ಒಡಿಶಾ ಹೈಕೋರ್ಟ್​ಗೆ ವರ್ಗಾವಣೆ

LEAVE A REPLY

Please enter your comment!
Please enter your name here