ತುಮಕೂರು (Tumkur )ಜಿಲ್ಲೆಯ ಪಾವಗಡ (Pavagada )ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿಂದೆಂದೂ ಇಲ್ಲದಷ್ಟು ಭಾರಿ ಪ್ರಮಾಣದಲ್ಲಿ ಮಳೆ (Heavy Rain)ಆಗುತ್ತಿದೆ. ಪರಿಣಾಮ ಪಾವಗಡ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ.
ಪಾವಗಡ ತಾಲೂಕಿನ ಹುಸೇನ್ ಪುರ (HusseinPura) ಗ್ರಾಮದ ಕೆರೆ ಕೋಡಿ ಬಿದ್ದಕ್ ಕಾರಣ ಗ್ರಾಮಕ್ಕೆ ನೀರು ನುಗ್ಗಿದೆ. ಇಡೀ ಗ್ರಾಮವನ್ನು ನೀರು ಆವರಿಸಿದೆ. ನೂರಾರು ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ದಾರೆ.
ಇಡೀ ಹುಸೇನ್ ಪುರ ಗ್ರಾಮದ ಮಧ್ಯೆ ನದಿಯೋಪಾದಿಯಲ್ಲಿ ನೀರು ಹರಿಯುತ್ತಿದೆ.
ಪಾವಗಡ ತಾಲೂಕಿನ ಪಳವಳ್ಳಿ ಕೆರೆ (Palavalli Kere)25 ವರ್ಷದ ಬಳಿಕ ಮೊದಲ ಬಾರಿಗೆ ಕೋಡಿ ಬಿದ್ದಿದೆ. ಈ ಭಾಗದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.
ಪಾವಗಡ ತಾಲೂಕಿನಲ್ಲಿ ಇಲ್ಲಿಯವರೆಗೂ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ತೋಟಗಾರಿಕಾ ಬೆಳೆಗಳು ನಾಶವಾಗಿವೆ.