ಮಂಗಳೂರು: ಕರ್ತವ್ಯದಲ್ಲಿದ್ದ ಹೆಡ್​ಕಾನ್ಸ್​ಸ್ಟೇಬಲ್​ ಹೃದಯಾಘಾತದಿಂದ ನಿಧನ

ಕರ್ತವ್ಯದಲ್ಲಿ ಹೆಡ್​ ಕಾನ್ಸ್​​ಸ್ಟೇಬಲ್​ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಕೊಣಾಜೆ ಪೊಲೀಸ್​ ಠಾಣೆಯ ಹೆಡ್​ ಕಾನ್ಸ್​ಸ್ಟೇಬಲ್​ ಜಗನ್ನಾಥ ಸಾವನ್ನಪ್ಪಿದ್ದಾರೆ.
44 ವರ್ಷದ ಜಗನ್ನಾಥ ಅವರು 2000ರಲ್ಲಿ ಪೊಲೀಸ್​ ಸೇವೆಗೆ ಸೇರ್ಪಡೆ ಆಗಿದ್ದರು.
ಇವತ್ತು ಕರ್ತವ್ಯದಲ್ಲಿದ್ದಾಗ ಇದ್ದಕಿದ್ದಂತೆ ಅಸ್ವಸ್ಥಗೊಂಡ ಜಗನ್ನಾಥ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರ ಪ್ರಾಣ ಉಳಿಸಿಕೊಳ್ಳಲು ಆಗಲಿಲ್ಲ.
ಪುತ್ತೂರು ತಾಲೂಕಿನ ಸವಣೂರು ಮೂಲದ ಇವರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here