ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿಯವರು ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ ನೀಡಿ, ‘ಬಿಜೆಪಿ ಕುಟುಂಬ ಕೊಂಡಿಗಳ ಆಡಂಬೋಲ’ ಎಂದು ಹೇಳಿದ್ದಾರೆ. ಆ ಮೂಲಕ ಜೆಡಿಎಸ್ ಪಕ್ಷ ಕುಟುಂಬ ರಾಜಕಾರಣದಲ್ಲಿ ಸಿಲುಕಿದೆ ಎಂಬ ಬಿಜೆಪಿಯ ಹೇಳಿಕೆಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದಾರೆ.
ಇಂದು ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿಯವರು, ಹೌದು. ನಾನು ಲಕ್ಕಿಡಿಪ್ ಸಿಎಂ, ಏನೀಗ? ಈಗ ಪಟ್ಟದಲ್ಲಿ ಕೂತಿರುವ ನಿಮ್ಮ ಸಿಎಂ ಅವರೇನು ಚುನಾವಣೆಯಲ್ಲಿ ಜನಾದೇಶ ಪಡೆದ ಘೋಷಿತ ಮುಖ್ಯಮಂತ್ರಿಯಾ? ಅವರೂ ಲಕ್ಕಿಡಿಪ್ಪು ಎಂಬುದನ್ನು ಮರೆತರೆ ಹೇಗೆ?
ಲಕ್ಕಡಿಪ್ ಸಿಎಂ ಎಂದರೆ ಅಪಮಾನವೇನೂ ಅಲ್ಲ ನನಗೆ. ಆಕಸ್ಮಿಕ ಮುಖ್ಯಮಂತ್ರಿ ಎಂದು ಅನೇಕ ಸಲ ಹೇಳಿದ್ದೇನೆ. ಆದರೆ, ʼಆಪರೇಷನ್ ಕಮಲದ ಸಿಎಂʼ ಎನ್ನುವುದಕ್ಕಿಂತಾ ಕೀಳಾ ಅದು? ಯಾವುದು ಮೇಲು? ಯಾವುದು ಕೀಳು? ಸ್ವಲ್ಪ ಹೇಳಿ?
ಕುಟುಂಬ ರಾಜಕಾರಣದ ಕೊಂಡಿಗಳ ಬಗ್ಗೆ ಹೇಳಿದ್ದೀರಿ. ಈಗಾಗಲೇ ಪಟ್ಟಿ ಕೊಟ್ಟಿದ್ದೇನೆ. ಮತ್ತೆ ನಿಮ್ಮ ಅವಗಾಹನೆಗೆ;
1.ಯಡಿಯೂರಪ್ಪ & ಸನ್ಸ್
2.ರವಿ ಸುಬ್ರಹ್ಮಣ್ಯ-ತೇಜಸ್ವಿಸೂರ್ಯ
3.ಅಶೋಕ್-ರವಿ
4.ವಿ.ಸೋಮಣ್ಣ-ಅರುಣ್ ಸೋಮಣ್ಣ
5.ಅರವಿಂದ ಲಿಂಬಾಳಿ-ರಘು
6.ಎಸ್.ಆರ್.ವಿಶ್ವನಾಥ್-ವಾಣಿ ವಿಶ್ವನಾಥ್
7.ಜಗದೀಶ ಶೆಟ್ಟರ್-ಪ್ರದೀಪ್ ಶೆಟ್ಟರ್
8.ಮುರುಗೇಶ ನಿರಾಣಿ-ಹನುಮಂತ ನಿರಾಣಿ
9.ಜಿ.ಎಸ್.ಬಸವರಾಜು-ಜ್ಯೋತಿ ಗಣೇಶ್
10.ಜಾರಕಿಹೊಳಿ ಕುಟುಂಬ
11.ಕತ್ತಿ ಕುಟುಂಬ
12.ಜೊಲ್ಲೆ ಕುಟುಂಬ
13.ಅಂಗಡಿ ಕುಟುಂಬ
14.ಉದಾಸಿ ಕುಟುಂಬ
15.ಶ್ರೀರಾಮುಲು ಕುಟುಂಬ
16.ರೆಡ್ಡಿ ಬ್ರದರ್ಸ್
ಕುಟುಂಬ ರಾಜಕಾರಣದ ಕೊಂಡಿಗಳ ಬಗ್ಗೆ ಹೇಳಿದ್ದೀರಿ. ಈಗಾಗಲೇ ಪಟ್ಟಿ ಕೊಟ್ಟಿದ್ದೇನೆ. ಮತ್ತೆ ನಿಮ್ಮ ಅವಗಾಹನೆಗೆ;
1.ಯಡಿಯೂರಪ್ಪ & ಸನ್ಸ್
2.ರವಿ ಸುಬ್ರಹ್ಮಣ್ಯ-ತೇಜಸ್ವಿಸೂರ್ಯ
3.ಅಶೋಕ್-ರವಿ
4.ವಿ.ಸೋಮಣ್ಣ-ಅರುಣ್ ಸೋಮಣ್ಣ
5.ಅರವಿಂದ ಲಿಂಬಾಳಿ-ರಘು
6.ಎಸ್.ಆರ್.ವಿಶ್ವನಾಥ್-ವಾಣಿ ವಿಶ್ವನಾಥ್
7.ಜಗದೀಶ ಶೆಟ್ಟರ್-ಪ್ರದೀಪ್ ಶೆಟ್ಟರ್
6/8— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 6, 2022
ನಿಮ್ಮ ಪರಿವಾರ ಪುರಾಣ ಇನ್ನೂ ಇದೆ. ‘ಬಿಜೆಪಿ ಕುಟುಂಬ ಕೊಂಡಿಗಳ ಆಡಂಬೋಲ’ ಎನ್ನುವುದೂ ಗೊತ್ತಿದೆ. ರಾಷ್ಟ್ರವ್ಯಾಪಿ ವ್ಯಾಪಿಸಿರುವ ಕಮಲದ ಕುಟುಂಬವ್ಯಾಧಿ ಕೊಂಡಿಗಳನ್ನು ಬಿಚ್ಚಬೇಕೆ? ನೀವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗೌರಿಶಂಕರದಷ್ಟು ಎತ್ತರ ಕಾಣುವ ʼಬಿಜೆಪಿ ಪರಿವಾರ ಪರ್ವತʼಗಳ ಬಗ್ಗೆ ಹೇಳಬೇಕಾದರೆ ‘ಪರಿವಾರಕೋಟಿ’ಯನ್ನೇ ಬರೆಯಬಹುದು ಎಂದು ಹೇಳಿದ್ದಾರೆ.
ಜೆಡಿಎಸ್ ಪಕ್ಷ ದೇವೇಗೌಡರ ಕುಟುಂಬದ ಸ್ವತ್ತಾಗಿದ್ದು, ಇದು ಕುಟುಂಬ ರಾಜಕಾರಣದ ಬಹುದೊಡ್ಡ ದೃಷ್ಟಾಂತ ಎಂದು ಬಿಜೆಪಿ ಜೆಡಿಎಸ್ ಮೇಲೆ ವಾಗ್ದಾಳಿ ನಡೆಸುತ್ತಿತ್ತು. ಇದೀಗ, ಕುಮಾರಸ್ವಾಮಿಯವರು 16 ಕುಟುಂಬಗಳ ಪಟ್ಟಿ ನೀಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.