ಜೆಡಿಎಸ್ ಮುಖಂಡ ಹಾಗೂ ಎಚ್.ಡಿ.ಕುಮಾರಸ್ವಾಮಿಯವರು ಮಂಡ್ಯದಲ್ಲಿ ರಸ್ತೆ ಬದಿಯಲ್ಲಿ ಕುಳಿತು ನೂರಾರು ಕಾರ್ಯಕರ್ತರೊಂದಿಗೆ ಟೀ ಸೇವನೆ ಮಾಡಿದ್ದಾರೆ.
ಬೆಂಗಳೂರಿಗೆ ತೆರಳುವ ಮಾರ್ಗಮಧ್ಯದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲದ ರಸ್ತೆ ಬದಿ ಟೀ ಕ್ಯಾಂಟೀನ್ ನಲ್ಲಿ ಕುಮಾರಸ್ವಾಮಿ ನೂರಾರು ಕಾರ್ಯಕರ್ತರೊಂದಿಗೆ ಟೀ ಸೇವನೆ ಮಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿಯವರೊಂದಿಗೆ ಕಾರ್ಯಕರ್ತರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.
ಟೀ ಕುಡಿದು ಕಾರ್ಯಕರ್ತರ ಕುಶಲೋಪರಿಯನ್ನು ವಿಚಾರಿಸಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿಯವರಿಗೆ ಜೊತೆಯಾಗಿ ಶಾಸಕ ಸುರೇಶ್ ಗೌಡ, ಎಂಎಲ್ಸಿ ಅಪ್ಪಾಜಿಗೌಡ ಸಾಥ್ ನೀಡಿದರು.