ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (H D Kumarswamy) ಅವರು ಇವತ್ತು ಹಾಸನ ನಗರಕ್ಕೆ (Hassan) ಭೇಟಿ ನೀಡಲಿದ್ದು, ದಿವಂಗತ ಮಾಜಿ ಶಾಸಕ ಹೆಚ್ ಎಸ್ ಪ್ರಕಾಶ್ (H S Prakash) ಅವರ ಜನ್ಮದಿನದ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಮಾಜಿ ಸಚಿವ ಹೆಚ್ ಡಿ ರೇವಣ್ಣ ( H D Revanna) ಅವರ ಎದುರೇ ಹೆಚ್ ಪಿ ಸ್ವರೂಪ್ ( H P Swaroop) ಅವರ ಬೆಂಬಲಿಗರು ಗಲಾಟೆ ಮಾಡಿದ್ದರು. ಗಲಾಟೆ ಮಾಡಿದ್ದವರನ್ನು ರೇವಣ್ಣ ಅವರು ರೌಡಿಗಳೆಂದು ಕರೆದಿದ್ದರು.
ಈ ಗಲಾಟೆಯ ಬಳಿಕ ಹಾಸನ ಟಿಕೆಟ್ ಆಕಾಂಕ್ಷಿ ಆಗಿರುವ ಸ್ವರೂಪ್ ಅವರು ತಮ್ಮ ತಂದೆಯ ಜನ್ಮದಿನದ ಆಚರಣೆಯ ನೆಪದಲ್ಲಿ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಹಾಸನ (Hassan) ನಗರದ ರಿಂಗ್ ರಸ್ತೆಯಲ್ಲಿ ಆಯೋಜನೆ ಆಗಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಕೂಡಾ ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪಾಲ್ಗೊಂಡರೆ ಆಗ ಹಾಸನ ನಗರ ಕ್ಷೇತ್ರದಲ್ಲಿ ತನ್ನ ಪರವಾದ ಸಂದೇಶ ರವಾನೆ ಆಗಲಿದೆ ಎನ್ನುವುದು ಹೆಚ್ ಪಿ ಸ್ವರೂಪ್ ಅವರ ಲೆಕ್ಕಾಚಾರ.
ಈ ಕಾರ್ಯಕ್ರಮಕ್ಕೆ ಮಾಜಿ ಸಚಿವ ಹೆಚ್ ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಗೈರಾಗುವ ಸಾಧ್ಯತೆ ಇದೆ.
ADVERTISEMENT
ADVERTISEMENT