ಹಾಸನ ನಗರಸಭೆ ಕೌನ್ಸಿಲರ್, ಜೆಡಿಎಸ್ ಮುಖಂಡನ ಬರ್ಬರ ಹತ್ಯೆ

ಹಾಸನ ನಗರಸಭೆ ಸದಸ್ಯ, ಜೆಡಿಎಸ್ ಪಕ್ಷದ ಮುಖಂಡ ಪ್ರಶಾಂತ್ ನಾಗರಾಜ್ ಅವರನ್ನು ಹತ್ಯೆ ಮಾಡಲಾಗಿದೆ. ಹಾಸನ ನಗರದ ಜವೇನಹಳ್ಳಿ ಮಠದ ರಸ್ತೆಯ ಲಕ್ಷಿö್ಮÃಪುರ ಬಡಾವಣೆಯಲ್ಲಿ ಬೈಕ್‌ನಲ್ಲಿ ಒಬ್ಬರೇ ಹೋಗುತ್ತಿದ್ದಾಗ ಹಂತಕರು ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.

ನಗರಸಭೆಯ 16ನೇ ವಾರ್ಡ್ನಿಂದ ಮೊದಲ ಬಾರಿಗೆ ಸ್ಪರ್ಧಿಸಿ 1,700 ಮತಗಳ ಅಂತರದಿAದ ಪ್ರಶಾಂತ್ ನಾಗರಾಜ್ ಅವರು ಗೆದ್ದು ಕೌನ್ಸಿಲರ್ ಆಗಿದ್ದರು.

ಮನೆಗೆ ಅರ್ಧ ಕಿಲೋ ಮೀಟರ್ ದೂರ ಇರುವಾಗ ಈ ದಾಳಿ ನಡೆದಿದೆ. ಕೈ ಮತ್ತು ತಲೆಯ ಭಾಗಕ್ಕೆ ಮಾರಕಾಸ್ತçಗಳಿಂದ ದಾಳಿ ಮಾಡಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

17 ವರ್ಷಗಳ ಹಿಂದೆ ಪ್ರಶಾಂತ್ ನಾಗರಾಜ್ ಅವರ ತಂದೆ ಹಾ ರಾ ನಾಗರಾಜ್ ಅವರನ್ನೂ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇವರು ಡಾ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರೂ, ಕನ್ನಡ ಪರ ಹೋರಾಟಗಾರರೂ ಆಗಿದ್ದರು. ಹಾ ರಾ ನಾಗರಾಜ್ ಅವರ ಹತ್ಯೆಗೆ ಪ್ರತೀಕಾರವಾಗಿ ಗ್ಯಾರಳ್ಳಿ ತಮ್ಮಯ್ಯ ಎಂಬವರನ್ನು ಹತ್ಯೆ ಮಾಡಲಾಗಿತ್ತು.

ಗ್ಯಾರಳ್ಳಿ ತಮ್ಮಯ್ಯ ಹತ್ಯೆ ಕೇಸ್‌ನಲ್ಲಿ ಪ್ರಶಾಂತ್ ಖುಲಾಸೆಗೊಂಡಿದ್ದರು.

 

LEAVE A REPLY

Please enter your comment!
Please enter your name here