ಹಂಸಲೇಖ ವಿಚಾರಣೆಗೆ ಹಾಜರು : ಪೊಲೀಸ್ ಠಾಣೆ ಮುಂದೆ ಹೈಡ್ರಾಮ

ಬೆಂಗಳೂರು: ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗಾಗಿ ಹಂಸಲೇಖ ಅವರು ಬಸವನಗುಡಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.

ಹಂಸಲೇಖ ಅವರ ಜೊತೆ ನಟ ಚೇತನ್ ಕೂಡ ಆಗಮಿಸಿದ್ದಾರೆ. ಹಂಸಲೇಖ ಜೊತೆ ನಟ ಚೇತನ್​ ಆಗಮಿಸಿರುವುದನ್ನು ಖಂಡಿಸಿ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ದಲಿತ ಸಂಘಟನೆಗಳು ಕೂಡ ಹಂಸಲೇಖ ಅವರನ್ನು ಬೆಂಬಲಿಸಿ ಬಸವನಗುಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿವೆ.

ಎರಡೂ ಸಂಘಟನೆಗಳು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಜನರನ್ನ ಚದುರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ನಟ ಚೇತನ್ ಠಾಣೆ ಒಳಗೆ ಹೋಗದ ರೀತಿಯಲ್ಲಿ ಹಿಂದೂ ಸಂಘಟನೆಗಳು ತಡೆದಿವೆ.

LEAVE A REPLY

Please enter your comment!
Please enter your name here