ಜ್ಞಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ವರದಿ ಬೆನ್ನಲ್ಲೇ, ಉತ್ತರ ಪ್ರದೇಶದ ವಾರಣಾಸಿಯ ನ್ಯಾಯಾಲಯವು ಮಸೀದಿಯ ಸಂಕೀರ್ಣದಲ್ಲಿರುವ ಕೊಳವನ್ನು ಸೀಲ್ ಮಾಡುವಂತೆ ತೀರ್ಪ ನೀಡಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಮೂರು ದಿನಗಳ ವೀಡಿಯೋಗ್ರಫಿ ಸಮೀಕ್ಷೆಗೆ ನ್ಯಾಯಾಲಯ ಆದೇಶ ನೀಡಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಗೆ ಒಂದು ದಿನ ಬಾಕಿ ಇರುವಂತೆಯೇ ಸಮೀಕ್ಷೆ ಪೂರ್ಣಗೊಂಡಿದೆ. ಇಂದು ಕೊನೆಯದಿನ ಸಂಕೀರ್ಣದ ಬಳಿ ಬಿಗಿ ಭದ್ರತೆ ಮತ್ತು ನಿರ್ಬಂಧಗಳ ನಡುವೆ ಚಿತ್ರೀಕರಣ ಸಮೀಕ್ಷೆ ಪ್ರಾರಂಭವಾಗಿತ್ತು.
ಇಂದು ಬೆಳಿಗ್ಗೆ ವೀಡಿಯೋಗ್ರಫಿ ಸಮೀಕ್ಷೆ ಆರಂಭವಾದ ನಂತರ ಮಸೀದಿಯ ಆವರಣದಲ್ಲಿರುವ ಕೊಳದಿಂದ ನೀರನ್ನು ಹೊರ ಹರಿಸಲಾಯಿತು. ಈ ವೇಳೆ ಕೊಳದಲ್ಲಿ “ಶಿವಲಿಂಗ” ಪತ್ತೆಯಾಗಿದೆ ಎಂದು ವಕೀಲರು ಹೇಳಿದ್ದಾರೆ.
ಈ ಕೊಳದ ನೀರನ್ನು ದೇವರ ಶುದ್ದೀಕರಣದ ಆಚರಣೆಗಳಿಗಾಗಿ ಬಳಸಲಾಗುತ್ತಿತ್ತು ಎಂದು ವಕೀಲ ಸುಭಾಶ್ ನಂದನ್ ಚತುರ್ವೇದಿ ಹೇಳಿದ್ದಾರೆ. ಇವರು, ಮಸೀದಿಯ ಹಿಂಭಾಗದಲ್ಲಿರುವ ದೇಗುಲದಲ್ಲಿ ಪ್ರಾರ್ಥನೆ ಮಾಡಲು ವರ್ಷಪೂರ್ತಿ ಕೊಳದ ನೀರನ್ನು ಬಳಸಲು ಮಸೀದಿಯ ಪ್ರವೇಶ ಕೋರಿದ್ದ ಹಿಂದೂ ಮಹಿಳೆಯರ ಗುಂಪನ್ನು ಪ್ರತಿನಿಧಿಸುವ ವಕೀಲರಾಗಿದ್ದಾರೆ.
ಈ ಕೊಳದ ನೀರನ್ನು ಮುಸ್ಲೀಮರು ಶುದ್ದೀಕರಣಕ್ಕಾಗಿ ಬಳಸುತ್ತಿದ್ದಾರೆ. ಆದ್ದರಿಂದ ಈ ಕೊಳವನ್ನು ಮುಚ್ಚಬೇಕು ಎಂದು ಅರ್ಜಿದಾರರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿರುವ ನ್ಯಾಯಾಲಯವರು ಪ್ರಸ್ತುತ ಕೊಳವನ್ನು ಬಳಸದಂತೆ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ಬಂಧ ವಿಧಿಸಿದೆ.
ಮಸೀದಿ ಸಂಕೀರ್ಣದಲ್ಲಿ “ಶಿವಲಿಂಗ” ಪತ್ತೆಯಾದ ಬಗ್ಗೆ ವರದಿಗಳ ಬಗ್ಗೆ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಅವರು ದೃಢಪಡಿಸಿಲ್ಲ.
ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವಿವರಗಳನ್ನು ಆಯೋಗದ ಯಾವುದೇ ಸದಸ್ಯರು ಬಹಿರಂಗಪಡಿಸಿಲ್ಲ. ಸಮೀಕ್ಷಾ ತಂಡವು ಮೂರು ಗುಮ್ಮಟಗಳು, ಭೂಗತ ನೆಲಮಾಳಿಗೆಗಳು, ಕೊಳವನ್ನು ಚಿತ್ರೀಕರಿಸಿದೆ. ನಾಳೆ ನ್ಯಾಯಾಲಯಕ್ಕೆ ಈ ಚಿತ್ರೀಕರಣದ ಸಮೀಕ್ಷೆಯ ವರದಿಯನ್ನು ಹಂಚಿಕೊಳ್ಳಲಿದ್ದೇವೆ ಸರ್ಕಾರಿ ವಕೀಲ ಮಹೇಂದ್ರ ಪ್ರಸಾದ್ ಪಾಂಡೆ ಹೇಳಿದ್ದಾರೆ.
ಜ್ಞಾನವ್ಯಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಂತಿದೆ. ಮಸೀದಿಯ ಗೋಡೆಗಳ ಮೇಲಿನ ವಿಗ್ರಹಗಳ ಮುಂದೆ ಮುಂದೆ ದೈನಂದಿನ ಪ್ರಾರ್ಥನೆಗೆ ಅನುಮತಿ ನೀಡುವಂತೆ ಮಹಿಳೆಯರ ಗುಂಪು ಸ್ಥಳೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಜ್ಯಾನವ್ಯಾಪಿ ಮಸೀದಿಯ ವೀಡಿಯೋ ಚಿತ್ರೀಕರಣ ನಡೆಸುವಂತೆ ಆದೇಶ ನೀಡಿತ್ತು.
https://youtu.be/PIY7X7wa7QM