ಗುಜರಾತ್​ ಚುನಾವಣಾ ಪೂರ್ವ ಸಮೀಕ್ಷೆ – ಐದು ಸಮೀಕ್ಷೆಗಳಲ್ಲಿ ಏನು ಲೆಕ್ಕಾಚಾರ..?

ಡಿಸೆಂಬರ್​ 8ರಂದು ಫಲಿತಾಂಶ ಹೊರಬೀಳಲಿರುವ ಗುಜರಾತ್​ ವಿಧಾನಸಭಾ ಚುನಾವಣೆಯ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಈ ಬಾರಿ ಬಿಜೆಪಿಗೆ ಪ್ರಚಂಡ ಬಹುಮತದ ಸುಳಿವು ಸಿಕ್ಕಿದೆ. ಕಾಂಗ್ರೆಸ್​​ಗೆ ಸೀಟುಗಳ ನಷ್ಟ ಆಗಲಿದ್ದು, ಗುಜರಾತ್​ ರಾಜಕೀಯದಲ್ಲಿ ಹೊಸದಾಗಿ ಕಾಲಿಟ್ಟಿರುವ ಆಮ್​ ಆದ್ಮಿ ಪಾರ್ಟಿ ಕಾಂಗ್ರೆಸ್​ ಪಕ್ಷಕ್ಕೆ ದೊಡ್ಡ ಆಘಾತ ನೀಡಲಿದೆ. ತ್ರಿಕೋನ ಸ್ಪರ್ಧೆಯ ಲಾಭದಲ್ಲಿ ಗುಜರಾತ್​ನಲ್ಲಿ ದಾಖಲೆಯ ಸೀಟುಗಳೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ಚುನಾವಣಾ ಸಮೀಕ್ಷೆಗಳು ಅಂದಾಜು ಮಾಡಿವೆ.
ಇಂಡಿಯಾ ಟಿವಿ-ಮ್ಯಾಟ್ರೈಜ್​ ಚುನಾವಣಾ ಪೂರ್ವ ಸಮೀಕ್ಷೆ:
ಬಿಜೆಪಿ BJP : 119 (+20)
ಕಾಂಗ್ರೆಸ್​ INC : 59 (-18)
ಆಪ್​ AAP : 3 (+3)
ಇತರೆ OTH : 1 (-5)
ಎಬಿಪಿ ನ್ಯೂಸ್​ – ಸಿ ವೋಟರ್​:
ಬಿಜೆಪಿ BJP : 131-139
ಕಾಂಗ್ರೆಸ್​ INC : 31-39
ಆಪ್​ AAP : 7-15
ಟೈಮ್ಸ್​ ನೌ – ಇಟಿಜಿ:
ಬಿಜೆಪಿ BJP : 125-130 – ಶೇಕಡಾವಾರು ಮತ (45%)
ಕಾಂಗ್ರೆಸ್​ INC : ಶೇಕಡಾವಾರು ಮತ 29-33 (21%)
ಆಪ್​ AAP : 20-24 ಶೇಕಡಾವಾರು ಮತ (29%)
ಇತರರು OTH : 1-3 ಶೇಕಡಾವಾರು ಮತ (5%)
ಝೀ 24 ಕಾಲಕ್​ – ದರ್ಪಣ್​:
ಬಿಜೆಪಿ BJP : 124-139 ಶೇಕಡಾವಾರು ಮತ (49.95%)
ಕಾಂಗ್ರೆಸ್​ INC : 42-51 ಶೇಕಡಾವಾರು ಮತ (35.3%)
ಆಪ್​ AAP : 0-3 ಶೇಕಡಾವಾರು ಮತ (8.9%)
ಪ್ರಾಸ್ಸಿಸ್ (PRACCIS)​​ ಸಮೀಕ್ಷೆ:
ಬಿಜೆಪಿ: 120+ (+30+)
ಕಾಂಗ್ರೆಸ್​: 40-50
ಆಪ್​ ಮತ್ತು ಇತರರು: ಉಳಿದ ಸೀಟುಗಳಲ್ಲಿ ಗೆಲ್ಲಬಹುದು.

LEAVE A REPLY

Please enter your comment!
Please enter your name here